ಶಿವಪುರ ಎಲಿಕೋಡು ಮಠ ಹೊರೆಕಾಣಿಕೆ ಸಮರ್ಪಣೆ

ಶಿವಪುರ ಎಲಿಕೋಡು ಮಠದಲ್ಲಿ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನಃಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಪ್ರಮುಖರಾದ ಬೈಕಾಡಿ ಮಂಜುನಾಥ ರಾವ್​ ಎಲಿಕೋಡು, ಶ್ರೀನಿವಾಸ ಎಲಿಕೋಡ, ನಿತ್ಯಾನಂದ ಶೆಟ್ಟಿ ಶಿವಪುರ, ಮಾರ್ಮಕ್ಕಿ ವಿಶ್ವನಾಥ ನಾಯಕ್​, ಸುರೇಶ ಶೆಟ್ಟಿ ಶಿವಪುರ ಮೊದಲಾದವರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ
  • ಪುನಃಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಶಿವಪುರ ಎಲಿಕೋಡು ಮಠದಲ್ಲಿ ನೂತನ ಶಿಲಾಮಯ ಗರ್ಭಗೃಹ ಸಮರ್ಪಣೆ, ಪುನಃಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ಆರಂಭಗೊಂಡಿತು.
ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಶುಕ್ರವಾರ ಸಂಜೆ ಮುಖಂಡರಾದ ಬೈಕಾಡಿ ಮಂಜುನಾಥ ರಾವ್​ ಎಲಿಕೋಡು ನೇತೃತ್ವದಲ್ಲಿ ಎಲಿಕೋಡು ಮಠಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಎಲಿಕೋಡು ಮಠದ ಪ್ರಧಾನ ಅರ್ಚಕ ವಾಸುದೇವ ಆಚಾರ್ಯ ಶಿವಪುರ ಪೇಟೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಶಿವಪುರದ ಭಜನಾ ತಂಡ ಮತ್ತು ವಾದ್ಯಘೋಷಗಳ ತಂಡ ಮೆರವಣಿಗೆಗೆ ಮೆರುಗು ನೀಡಿತು.
ಎಲಿಕೋಡು ಮಠದಲ್ಲಿ ಅರ್ಚಕ ವಾಸುದೇವಾ ಭಟ್​ ಶಿವಪುರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸಲ್ಲಿಸಿ ಬ್ರಹ್ಮಕಲಶಾಭಿಷೇಕದ ವಿಧಿವಿಧಾನಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಎಲಿಕೋಡು ಮಠ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಎಲಿಕೋಡು, ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಶಿವಪುರ, ಶ್ರೀನಾಥ್​ ಎಲಿಕೋಡು, ಶಿವಪುರ ಶಂಕರದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್​, ವಿವಿಧ ಪ್ರಮುಖರಾದ ಸುರೇಶ ಶೆಟ್ಟಿ ಶಿವಪುರ, ಶ್ರೀನಿವಾಸ ಹೆಬ್ಬಾರ್​ ಶಿವಪುರ, ಸಂತೋಷ ಕುಮಾರ್​ ಶೆಟ್ಟಿ ನಾಯರಕೋಡು, ಶಂಕರನಾರಾಯಣ ಕೊಡಂಚ, ಸುನಂದ ಕುಲಾಲ್​ ಶಿವಪುರ, ರಾಘವೇಂದ್ರ ಪ್ರಭು ಶಿವಪುರ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net