ಪರಿಸರ ಸಂರಕ್ಷಣೆಯಿಂದ ಭರವಸೆ

 ಮರಿಯಾಡಿಯ ನಡ್ಯೋಡಿ ದೈವಸ್ಥಾನದಲ್ಲಿ ‘ಸಸ್ಯ ಶ್ಯಾಮಲಾ-2026’ ಕಾರ್ಯಕ್ರಮದಲ್ಲಿ ರಶ್ಮಿತಾ ಜೈನ್, ಪ್ರಸನ್ನ ಹೆಗ್ಡೆ, ರಾಮದಾಸ ಆಸ್ರಣ್ಣ ಮತ್ತಿತರರಿದ್ದರು.
ಮರಿಯಾಡಿಯ ನಡ್ಯೋಡಿ ದೈವಸ್ಥಾನದಲ್ಲಿ ‘ಸಸ್ಯ ಶ್ಯಾಮಲಾ-2026’ ಕಾರ್ಯಕ್ರಮದಲ್ಲಿ ರಶ್ಮಿತಾ ಜೈನ್, ಪ್ರಸನ್ನ ಹೆಗ್ಡೆ, ರಾಮದಾಸ ಆಸ್ರಣ್ಣ ಮತ್ತಿತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
‘ಹಸಿರೇ ಉಸಿರಾಗಲಿ, ನೆನಪೇ ಬೆಳಕಾಗಲಿ’ ಎಂಬ ಧ್ಯೇಯದೊಂದಿಗೆ ಅಭಿಯಾನ ರೂಪಿಸಲಾಗಿದೆ. ಒಂದು ಗಿಡ ನೆಡುವುದು ಕೇವಲ ಪರಿಸರ ಸಂರಕ್ಷಣೆ ಕಾರ್ಯವಲ್ಲ. ಮುಂದಿನ ಪೀಳಿಗೆಗೆ ಜೀವದ ಭರವಸೆಯನ್ನು ಬಿತ್ತುವ ಪುಣ್ಯಯಜ್ಞ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.
ಎಕ್ಸಲೆಂಟ್ ಪದವಿಪೂರ್ವ ಕಾಲೇಜು ವತಿಯಿಂದ ಪ್ರಕೃತಿ ಪ್ರೇಮಿ ರಸಿಕಾ ಜೈನ್ ಸ್ಮರಣಾರ್ಥ ಹಮ್ಮಿಕೊಂಡಿರುವ ‘ಸಸ್ಯ ಶ್ಯಾಮಲಾ-2026’ ಸಾವಿರ ಗಿಡಗಳನ್ನು ನೆಡುವ, ಹಂಚುವ ಹಸಿರು ಅಭಿಯಾನದ ಮೂರನೇ ಕಾರ್ಯಕ್ರಮ ಮರಿಯಾಡಿಯ ನಡ್ಯೋಡಿ ದೈವಸ್ಥಾನದಲ್ಲಿ ನಡೆಯಿತು.
ನಡ್ಯೋಡಿ ದೈವಸ್ಥಾನ ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಮಾತನಾಡಿದರು. ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಸಂಕ್ರಮಣದ ಸೇವಾಕರ್ತ ತೆಂಕಬೆಟ್ಟುಗುತ್ತು ರಮೇಶ್ ರೈ ಅವರಿಗೆ ಪ್ರಥಮ ಸಸಿ ವಿತರಿಸಿದರು. ದೈವಸ್ಥಾನ ಆಡಳಿತ ಮಂಡಳಿ ಉಪಾಧ್ಯಕ್ಷ ವಿಶ್ವನಾಥ ಕೋಟ್ಯಾನ್, ಉಮೇಶ್ ಹೆಗ್ಡೆ, ಮಾಜಿ ಗೌರವಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಮಾಜಿ ಅಧ್ಯಕ್ಷ ದಿಲೀಪ್ ಕುಮಾರ್ ಶೆಟ್ಟಿ, ತೆಂಕಬೆಟ್ಟುಗುತ್ತು ಪ್ರದೀಪ್ ರೈ, ಉಮೇಶ್ ಕೋಟ್ಯಾನ್, ಉದ್ಯಮಿ ಆರ್.ಕೆ.ಭಟ್ ಉಪಸ್ಥಿತರಿದ್ದರು. ಸಂಸ್ಥೆ ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಉಪನ್ಯಾಸಕ ಡಾ.ವಾದಿರಾಜ ಕಲ್ಲುರಾಯ, ಎನ್‌ಎಸ್‌ಎಸ್ ಅಧಿಕಾರಿ ಅಶೋಕ್, ಉಪನ್ಯಾಸಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದರು.

ಕಾಲೇಜು ಕೇವಲ ಪಠ್ಯಪುಸ್ತಕಗಳ ಜ್ಞಾನ ನೀಡುವ ಕೇಂದ್ರಗಳಾಗಿರದೆ ಪ್ರಕೃತಿ ಬಗ್ಗೆ ಜವಾಬ್ದಾರಿಯ ಅರಿವು ಮೂಡಿಸುವ ಸಂಸ್ಕಾರ ಕೇಂದ್ರಗಳಾಗಬೇಕು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ‘ಸಸ್ಯ ಶ್ಯಾಮಲಾ’ ಅಭಿಯಾನದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಬೆಳೆಸುತ್ತಿರುವುದು ಶ್ಲಾಘನೀಯ.

— ಪ್ರಸನ್ನ ಹೆಗ್ಡೆ ನಡ್ಯೋಡಿ ದೈವಸ್ಥಾನ ಕಾರ್ಯದರ್ಶಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net