ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಪ್ರಮುಖರಾದ ನೀರೆ ಕೃಷ್ಣ ಶೆಟ್ಟಿ, ದೀಪಾ ಭಂಡಾರಿ ಚಾರ, ನವೀನ್ ಕೆ.ಅಡ್ಯಂತಾಯ ಮೊದಲಾದವರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಲವು ಸಾಧಕರಿಗೆ ಗೌರವ ಸನ್ಮಾನ
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಗೌರವ
ಹೆಬ್ರಿ: ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಗೋಪಾಲ ಭಂಡಾರಿ 75ನೇ ಹುಟ್ಟು ಹಬ್ಬವನ್ನು ಜುಲೈ 7ರಂದು ಆಚರಿಸಲಾಗುತ್ತದೆ. ಅವರ ಸ್ಮರಣೆಯಲ್ಲಿ ಹೆಬ್ರಿ ಬ್ಲಾಕ್ ವ್ಯಾಪ್ತಿಯ ಹಲವು ಸಾಧಕರಿಗೆ ಗೌರವ ಸನ್ಮಾನ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಅತ್ಯಧಿಕ ಅಂಕಗಳಿಸಿದ ತಲಾ ಒಬ್ಬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಗೌರವ ನೀಡಲಾಗುತ್ತದೆ ಎಂದು ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಹೆಬ್ರಿ ಹುತ್ತುರ್ಕೆಯ ಗೋಪಾಲ ಭಂಡಾರಿ ಅವರ ನಿವಾಸದಲ್ಲಿ ನಡೆದ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಮತ್ತು ಸಾಮಾಜಿಕ ಸೇವಾ ಟ್ರಸ್ಟ್ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಭಾನುವಾರ ಮಾತನಾಡಿದರು.
ಟ್ರಸ್ಟ್ ಕಾರ್ಯದರ್ಶಿ ದೀಪಾ ಭಂಡಾರಿ ಚಾರ, ಟ್ರಸ್ಟ್ ಪದಾಧಿಕಾರಿಗಳಾದ ನವೀನ್ ಕೆ.ಅಡ್ಯಂತಾಯ, ಮೋಹನದಾಸ ನಾಯಕ್ ಮೂರ್ಸಾಲು, ಬೈಕಾಡಿ ಮಂಜುನಾಥ್ ರಾವ್ ಶಿವಪುರ, ಜಗನ್ನಾಥ ಕುಲಾಲ್ ಶಿವಪುರ, ಶ್ವೇತಕುಮಾರ್, ರಾಘವೇಂದ್ರ ನಾಯ್ಕ ಹೆಬ್ರಿ ಉಪಸ್ಥಿತರಿದ್ದರು.