ಶಾಲೆಯ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಅವಕಾಶಗಳಿಗಾಗಿ ಕಾಯದೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಶಾಲೆ, ಹೆತ್ತ ತಂದೆ&ತಾಯಿ, ಹುಟ್ಟಿದ ಊರು ಮತ್ತು ಊರಿನ ದೇವಸ್ಥಾನಗಳನ್ನು ಮರೆಯಬಾರದು. ನಮ್ಮಿಂದಾದ ಸಣ್ಣ ಕೊಡುಗೆ ನೀಡಿದಾಗ ಮಾತ್ರ ನಾವೆಲ್ಲರೂ ಉತ್ತಮ ಸಮಾಜದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯ ಎಂದರು.