ಪರ್ಸ್ ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ

 ಬಿದ್ದು ಸಿಕ್ಕ ಪರ್ಸನ್ನು ಜೋಸ್ನಾ ಜಿಮ್ಮಿ ಅವರಿಗೆ ಉಪ್ಪಿನಂಗಡಿ ಸೌಧಿ ಫ್ಯಾನ್ಸಿ ಮಾಲೀಕ ಹಾರೂನ್ ರಶೀದ್ ಅಗ್ನಾಡಿ ಹಸ್ತಾಂತರಿಸಿದರು.
ಬಿದ್ದು ಸಿಕ್ಕ ಪರ್ಸನ್ನು ಜೋಸ್ನಾ ಜಿಮ್ಮಿ ಅವರಿಗೆ ಉಪ್ಪಿನಂಗಡಿ ಸೌಧಿ ಫ್ಯಾನ್ಸಿ ಮಾಲೀಕ ಹಾರೂನ್ ರಶೀದ್ ಅಗ್ನಾಡಿ ಹಸ್ತಾಂತರಿಸಿದರು.
Published on

ಉಪ್ಪಿನಂಗಡಿ: ಹಾಸನ ಬಸ್ ನಿಲ್ದಾಣದಲ್ಲಿ ಬಿದ್ದು ಸಿಕ್ಕಿದ ನಗದು ಹಾಗೂ ಅಮೂಲ್ಯ ದಾಖಲೆ ಹೊಂದಿದ್ದ ಪರ್ಸನ್ನು ಅದರ ವಾರಸುದಾರರನ್ನು ಪತ್ತೆ ಹಚ್ಚಿ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಕೇರಳದ ಕಣ್ಣೂರು ನಿವಾಸಿ ಜೋಸ್ನಾ ಜಿಮ್ಮಿ ಎಂಬ ಮಹಿಳೆ ಪರ್ಸ್ ಕಳೆದುಕೊಂಡವರಾಗಿದ್ದು, ಚಿಕಿತ್ಸೆಗೆ ಸಂಬಂಧಿಸಿ ಹಾಸನಕ್ಕೆ ಹೋದವರು, ಹಾಸನ ಬಸ್ ನಿಲ್ದಾಣದಲ್ಲಿ ಪರ್ಸ ಕಳೆದುಕೊಂಡಿದ್ದರು.
ಹಾಸನದಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ಆತೂರಿನ ತುಫೈಲ್ ಎಂಬುವರಿಗೆ ಪರ್ಸ್ ಸಿಕ್ಕಿದ್ದು, ಉಪ್ಪಿನಂಗಡಿ ಸೌಧಿ ಫ್ಯಾನ್ಸಿ ಮಾಲೀಕರಿಗೆ ತಂದೊಪ್ಪಿಸಿದ್ದರು. ಪರ್ಸ್‌ನಲ್ಲಿದ್ದ ಸ್ಟೊಡಿಯೋ ಒಂದರ ಕವರ್‌ನಲ್ಲಿದ್ದ ಮೊಬೈಲ್ ಫೋನ್ ನಂಬರ್ ಮೂಲಕ ಸ್ಟುಡಿಯೋ ಮಾಲೀಕರನ್ನು ಸಂಪರ್ಕಿಸಿ ಮಹಿಳೆಯನ್ನು ಪತ್ತೆ ಹಚ್ಚಲು ನೆರವು ಕೇಳಲಾಯಿತು. ಬಳಿಕ ಜೋಸ್ನಾ ಜಿಮ್ಮಿ ಅವರನ್ನು ಸಂಪರ್ಕಿಸಿ ಪರ್ಸ್ ಸಿಕ್ಕಿರುವ ವಿಚಾರ ತಿಳಿಸಲಾಯಿತು.

ಭಾನುವಾರ ಉಪ್ಪಿನಂಗಡಿಗೆ ಬಂದು ಸೌಧಿ ಫ್ಯಾನ್ಸಿ ಮಾಲೀಕ ಹಾರೂನ್ ರಶೀದ್ ಅಗ್ನಾಡಿ ಅವರಿಂದ ಪರ್ಸ್ ಸ್ವೀಕರಿಸಿದರು. ಪ್ರಾಮಾಣಿಕತೆ ಮೆರೆದ ತುಫೈಲ್ ಹಾಗೂ ಹಾರೂನ್ ರಶೀದ್ ಅಗ್ನಾಡಿ ಕಾರ್ಯವೈಖರಿ ಶ್ಲಾಘನೆಗೆ ಪಾತ್ರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net