

ಪಡುಬಿದ್ರಿ: ಕಲ್ಮಾಡಿಯ ಹರ್ಷಿತ್ ಎಸ್.ಕುಂದರ್ ಎಂಬುವರಿಗೆ ಸೇರಿದ ಹೋಂ ಸ್ಟೇವೊಂದಕ್ಕೆ ಅಪರಿಚಿತರು ಶನಿವಾರ ಅಕ್ರಮ ಪ್ರವೇಶಗೈದು ಕಟ್ಟಡ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ.
ಆರೋಪಿಗಳು ಗುರುತು ಮತ್ತು ಕೃತ್ಯ ಮರೆ ಮಾಚುವ ಸಲುವಾಗಿ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಕಳವು ಮಾಡಿದ್ದಾರೆ. ಘಟನೆ ನಡೆಯುವುದಕ್ಕೆ ಕೆಲವು ದಿನಗಳ ಮೊದಲು ಪಿತ್ರೋಡಿ ಕಲ್ಪೆಬೈಲು ಗೌತಮ್ ಎಂಬುವರಿಂದ ತನಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಪ್ರಸ್ತುತ ಘಟನೆ ನಡೆಯುವುದಕ್ಕೂ ಮುನ್ನವೇ ಕೆಲವರು ಪದೇಪದೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಕೆ ಹಾಕಿದ್ದರು ಎಂದು ಹರ್ಷಿತ್ ಶಂಕೆ ವ್ಯಕ್ತಪಡಿಸಿದ್ದಾರೆ.
ತನ್ನನ್ನು ಬೆದರಿಸುವ, ಆರ್ಥಿಕ ನಷ್ಟವನ್ನುಂಟುಮಾಡುವ ದುರುದ್ದೇಶದಿಂದ ಕೃತ್ಯವೆಸಗಿದ್ದಾರೆ. ಈ ಪ್ರಕರಣದಲ್ಲಿ ಗೌತಮ್ ಅವರಲ್ಲದೆ ಲಕ್ಷ್ಮಣ್ ಶ್ರೀಯಾನ್, ಚಂದ್ರಕಾಂತ್ ಮೆಂಡನ್, ವಿಷ್ಣು ಶ್ರೀಯಾನ್, ಪಾಂಡು ಶ್ರೀಯಾನ್ ಭಾಗಿಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.