ಪುತ್ತೂರು ಗ್ರಾಮಾಂತರ: ಖಾತೆದಾರರೊಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಏಕಾಏಕಿ ಸ್ಥಗಿತಗೊಂಡಿದ್ದು, ಈ ಬಗ್ಗೆ ಖಾತೆದಾರ ಬ್ಯಾಂಕ್‌ನ ಮೇಲಧಿಕಾರಿಗಳಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೆನರಾ ಬ್ಯಾಂಕ್ ತಿಂಗಳಾಡಿ ಶಾಖೆಯಲ್ಲಿ ಖಾತೆ ಹೊಂದಿರುವ ಹನೀಫ್ ರೆಂಜಲಾಡಿ ಅವರ ಖಾತೆಯಲ್ಲಿದ್ದ 24,758.82 ರೂ. ಹೋಲ್ಡ್ ಆಗಿದೆ ಎಂದು ಮೊಬೈಲ್‌ಗೆ ಆ.2ರಂದು ಸಂಜೆ ಮೆಸೇಜ್ ಬಂದಿತ್ತು.