ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಏಡ್ಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ನಿತ್ಯಾನಂದ್ ವಿ. ಗಾಂವ್ಕರ್ ಮಾತನಾಡಿದರು. ಡಾ. ಆಶಿತಾ ಆರ್., ಬಾಲರಾಜ್, ಡಾ. ರಘು ನಾಯ್ಕ, ಡಾ. ಜಯಮಂಗಳಾ ಇದ್ದರು.
Published on:
Copied
Follow Us
* ವಿದ್ಯಾರ್ಥಿಗಳಿಗೆ ಡಾ. ಆಶಿತಾ ಆರ್. ಕಿವಿಮಾತು
* ತೆಂಕನಿಡಿಯೂರು ಕಾಲೇಜಿನಲ್ಲಿ ಎಚ್ಐವಿ ತಡೆ ಅರಿವು
ಉಡುಪಿ: ಅಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಅಪರಿಚಿತ ವ್ಯಕ್ತಿಗಳಿಂದ ರಕ್ತ ಪಡೆಯುವುದರಿಂದ ಎಚ್ಐವಿ ಏಡ್ಸ್ ತಗುಲಬಹುದು. ಎಚ್ಐವಿಗೆ ತುತ್ತಾದವರಿಗೆ ಬಳಿಸಿದ ಸೂಜಿ ಸಿರೆಂಜ್ಗಳಿಂದ ಅಥವಾ ಸುರಕ್ಷಿತ ಕ್ರಮವಿಲ್ಲದೆ ದೇಹದಲ್ಲಿ ಟ್ಯಾಟೋ ಹಾಕಿಸಿಕೊಳ್ಳುವುದರಿಂದಲೂ ಈ ರೋಗ ಹರಡಬಹುದು. ಯುವಜನತೆ ಹೆಚ್ಚು ಜಾಗೃತರಾಗಿ ಎಚ್ಚರಿಕೆಯ ಜೀವನ ನಡೆಸಬೇಕು. ಸಂಯಮದಿಂದ ವರ್ತಿಸಬೇಕು ಎಂದು ಮುನಿಯಾಲು ಆಯುರ್ವೇದ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಆಶಿತಾ ಆರ್. ಕಿವಿಮಾತು ಹೇಳಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಹಾಗೂ ಮುನಿಯಾಲು ಆಯುರ್ವೇದ ವೈದ್ಯಕೀಯ ವಿಜ್ಞಾನ ಕಾಲೇಜು ಮಣಿಪಾಲ ಆಶ್ರಯದಲ್ಲಿ ಆಯೋಜಿಸಿದ್ದ ಏಡ್ಸ್ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಘು ನಾಯ್ಕ, ರೆಡ್ ಕ್ರಾಸ್ ಘಟಕದ ಸಂಚಾಲಕ ಪ್ರಶಾಂತ್ ನೀಲಾವರ, ಮುನಿಯಾಲು ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಡಾ. ನವನೀತ್, ಡಾ. ನಿಧಿ, ಡಾ. ರಿತಿಕಾ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಎನ್ಎಸ್ಎಸ್ ಘಟಕ-1ರ ಯೋಜನಾಧಿಕಾರಿ ಬಾಲರಾಜ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎನ್ಎಸ್ಎಸ್ ಘಟಕ-2ರ ಯೋಜನಾಧಿಕಾರಿ ಡಾ. ಜಯಮಂಗಳಾ ವಂದಿಸಿದರು. ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏಡ್ಸ್ ಎಂದರೇನು, ಕಾಯಿಲೆ ಬರಲು ಕಾರಣಗಳೇನು ಮತ್ತು ಪರಿಹಾರಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
"
ವಿದ್ಯಾರ್ಥಿಗಳು ಪರಿಶುದ್ಧ ಜೀವನ ನಡೆಸಿದ್ದಲ್ಲಿ ಯಾವ ರೋಗ-ರುಜಿನಗಳ ಬಗ್ಗೆ ಚಿಂತಿಸಬೇಕಿಲ್ಲ. ನೈತಿಕ ಹಾಗೂ ಪ್ರಾಮಾಣಿಕ ಬದುಕಿನಿಂದ ಸಾಮಾಜಿಕ ಸ್ವಾಸ್ಥ್ಯವೂ ಸಮರ್ಪಕವಾಗಿ ಇರಲಿದೆ.