ಕಂಚಿನಡ್ಕ ಪದವು ತ್ಯಾಜ್ಯ ಘಟಕದಲ್ಲಿ ಹಿಟಾಚಿ ಕಾರ್ಯಾರಂಭ

 ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯನಿರತ ಹಿಟಾಚಿ ಯಂತ್ರ.
ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾರ್ಯನಿರತ ಹಿಟಾಚಿ ಯಂತ್ರ.
Published on

ಬಂಟ್ವಾಳ: ನಾಲ್ಕೈದು ವರ್ಷಗಳಿಂದ ಬಂಟ್ವಾಳ ಪುರಸಭೆಯ ಕಾರ್ಯಾಲಯದ ಹಿಂದೆ ಬಳಕೆಯಾಗದೆ ಮೂಲೆ ಸೇರಿದ್ದ ಹಿಟಾಚಿ ಯಂತ್ರವನ್ನು ಸುಸ್ಥಿತಿಗೆ ತಂದು ಇದೀಗ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಕೊಂಡೊಯ್ದು ಯಂತ್ರಕ್ಕೆ ಚಾಲನೆ ನೀಡಲಾಗಿದೆ.

ಇನ್ನು ಮುಂದೆ ವಾರದ ಮೂರು ದಿನ ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಘಟಕಕ್ಕೆ ಕಸವನ್ನು ತಂದು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದಾಗಿ ಪುರಸಭೆಯ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ತಿಳಿಸಿದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಿದ್ದೇವೆ. ಈಗ ಮಳೆಗಾಲವಾಗಿರುವುದರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗಿದ್ದು ಇಲ್ಲಿಯೇ ಇರುವ ಎಂಆರ್‌ಎಫ್ ಘಟಕಕ್ಕೂ ಚಾಲನೆ ನೀಡಲಿದ್ದೇವೆ. ಇದರ ಜತೆಗೆ ಎರೆಹುಳ ಗೊಬ್ಬರ ಘಟಕವನ್ನೂ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net