ಇತಿಹಾಸ ಪ್ರಸಿದ್ಧ ಎಲ್ಲೂರು ಕಂಬಳ ವಿಜೇತರು

ಬೈಂದೂರು ಸಮೀಪದ ಎಲ್ಲೂರಿನಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ಕಂಬಳ ವೀಕ್ಷಣೆಗೆ ಸೇರಿದ್ದ ಜನಸ್ತೋಮ
ಬೈಂದೂರು ಸಮೀಪದ ಎಲ್ಲೂರಿನಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ಕಂಬಳ ವೀಕ್ಷಣೆಗೆ ಸೇರಿದ್ದ ಜನಸ್ತೋಮ
Published on
ಬೈಂದೂರು: ಇತಿಹಾಸ ಪ್ರಸಿದ್ಧ ಕುಡೂರು ಮನೆಯವರ ಯಜವಾನಿಕೆಯ ಎಲ್ಲೂರು ಕಂಬಳ ಗುರುವಾರ ವೈಭವದಿಂದ ನಡೆಯಿತು. ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ವಾರ್ಗದರ್ಶನದಲ್ಲಿ ನಡೆದ ಕಂಬಳಕ್ಕೆ ಕುಡೂರು ಮನೆಯ ಯಜವಾನ ರಾಮ್‌ಕಿಶನ್ ಹೆಗ್ಡೆ ಚಾಲನೆ ನೀಡಿದರು. ಉಡುಪಿ ಹಾಗೂ ಕಾರವಾರ ಜಿಲ್ಲೆಯ 48 ಜತೆ ಕೋಣಗಳು ಭಾಗವಹಿಸಿದ್ದವು.
ಶಾಸಕ ಗುರುರಾಜ್ ಗಂಟಿಹೊಳೆ, ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ರಾಮ್‌ರತನ್ ಹೆಗ್ಡೆ, ಅನುಪವಾ ಎಸ್.ಶೆಟ್ಟಿ, ಪ್ರೀತಮ್ ಎಸ್.ರೈ, ಶ್ರೀಶಾ ರೈ, ವೈಷ್ಣವಿ ಆರ್.ಹೆಗ್ಡೆ, ಸರ್ಜಿತ್ ಶೆಟ್ಟಿ ಕುಡೂರು, ಮೋಹನ್‌ದಾಸ್ ಶೆಟ್ಟಿ ಕುಡೂರು, ಎಂ.ಆರ್.ಶೆಟ್ಟಿ, ಎಂ.ರುರಾಮ್ ಶೆಟ್ಟಿ ಪ್ರಮುಖರಾದ ಕೆ.ಬಾಬು ಶೆಟ್ಟಿ, ರಾಜೇಶ್ ಕೆ.ಸಿ., ಎನ್.ದೀಪಕ್ ಕುವಾರ ಶೆಟ್ಟಿ, ವಿಕ್ರಂ ವೆಂಕಟ ಪೂಜಾರಿ, ಮಂಜುನಾಥ ಪೂಜಾರಿ, ಸುಧೀರ್ ದೇವಾಡಿಗ, ಭರತ್ ಕೊಠಾರಿ, ಪರಮೇಶ್ವರ ಭಟ್ ಬೊಳಂಬಳ್ಳಿ, ರತ್ನಾಕರ್ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ಸತೀಶ್ ಶೆಟ್ಟಿ ಅರೆ ಶಿರೂರು, ಗಣಪ ಗಂಗನಾಡು, ಶಿವರಾಂ ಶೆಟ್ಟಿ ಎಲ್ಲೂರು, ರವಿ ಹೋಬಳಿದಾರ್, ಆನಂದ್ ನಾಯ್ಕ ಸಣ್ಣಮನೆ, ಕುವಾರ ನಾಯ್ಕ, ಗೌಡ ಅಣ್ಣಪ್ಪ ಮರಾಠಿ ಎಲ್ಲೂರು ಇದ್ದರು. ಕೀಶೋರ್ ಪೂಜಾರಿ ಸಸಿಹಿತ್ಲು, ಕಿರಣ್ ಬಿಜೂರು, ಗಣೇಶ್ ಕೊಠಾರಿ ಉದ್ಘೋಷಕರಾಗಿದ್ದರು.
ಫಲಿತಾಂಶ
ಕಂಬಳದಲ್ಲಿ ವಿಜೇತರಾದವರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಗಣ್ಯರು ಟ್ರೋಫಿ ಹಾಗೂ ನಗದು ಬಹುವಾನ ವಿತರಿಸಿದರು.
ಹಲಗೆ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ(ಪ್ರ), ತೆಕ್ಕಟ್ಟೆ ಸುಧೀರ್ ದೇವಾಡಿಗ (ಕೋಣ ಓಡಿಸಿದವರು). ದಿ.ಶುಕ್ರ ಪೂಜಾರಿ ಮೊಳೆಬೈಲ್(ದ್ವಿ), ಭರತ್ ಶಿರೂರು ಮುದ್ದುಮನೆ (ಕೋಣ ಓಡಿಸಿದವರು).
ಹಗ್ಗ ಹಿರಿಯ: ದಿ.ವೆಂಕಟ ಪೂಜಾರಿ ಸಸಿಹಿತ್ಲು ಎ(ಪ್ರ), ಮಂಜುನಾಥ ಗೌಡ ಬೈಂದೂರು (ಕೋಣ ಓಡಿಸಿದವರು). ದಿ.ವೆಂಕಟ ಪೂಜಾರಿ ಸಸಿಹಿತ್ಲು ಬಿ(ದ್ವಿ), ಮಂಜುನಾಥ ಗೌಡ ಬೈಂದೂರು (ಕೋಣ ಓಡಿಸಿದವರು).
ಹಗ್ಗ ಕಿರಿಯ: ದುರ್ಗಾ ಫ್ರೆಂಡ್ಸ್ ಕಂಚಿಕಾನ್(ಪ್ರ), ಮಂಜುನಾಥ್ ಗೌಡ ಬೈಂದೂರು (ಕೋಣ ಓಡಿಸಿದವರು). ಗಿರಿಜಾ ರೋಡ್‌ಲೈನ್ಸ್ ಗಾಡಿ ಕೂಸ ಪೂಜಾರಿ ಕೋಟ(ದ್ವಿ), ಮಂಜುನಾಥ್ ಗೌಡ ಬೈಂದೂರು (ಕೋಣ ಓಡಿಸಿದವರು).
ಹಗ್ಗ ಅತಿ ಕಿರಿಯ: ಶ್ರೀ ಸ್ಕಂದ ಆರ್ವಿಕ್ ಪ್ರದೀಪ್ ಉಳ್ಳೂರು ಕಂದಾವರ(ಪ್ರ), ಹರೀಶ್ ಪೂಜಾರಿ ಬೈಂದೂರು (ಕೋಣ ಓಡಿಸಿದವರು). ಶಂಕು ಮಹಾಸತಿ ಸಂಕಡಗುಂಡಿ ಶಿರೂರ್(ದ್ವಿ), ಶಂಕರ್ ದೇವಾಡಿಗ ನಾಗೂರು (ಕೋಣ ಓಡಿಸಿದವರು). ಸುಜಿತ್ ಸುಪ್ರೀತ್ ಗಣಪ ಗಂಗನಾಡು(ತೃ), ವಿಶ್ವನಾಥ್ ದೇವಾಡಿಗ ಬೈಂದೂರು (ಕೋಣ ಓಡಿಸಿದವರು).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net