ಪವಿತ್ರ ತೀರ್ಥಗಳೊಂದಿಗೆ ಶೋಭಾಯಾತ್ರೆ ಐತಿಹಾಸಿಕ ಕ್ಷಣ

ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಸನ್ನಿಧಿಯಿಂದ ಪದ್ಯಾಣ ದೇವಸ್ಥಾನದ ಬ್ರಹ್ಮಕಲಶಕ್ಕೆ ಹೊರಟ  ಏಕಾದಶ ಕಲಶ ತೀರ್ಥ ರಥ ಯಾತ್ರೆಗೆ ಮಾಣಿಲದ ಮೋಹನದಾಸ ಪರಮಹಂಸ ಶ್ರೀಗಳು ಚಾಲನೆ ನೀಡಿದರು. ಶಾಸಕರಾದ ಅಶೋಕ್‌ಕುಮಾರ್ ರೈ, ಹರೀಶ್ ಪೂಂಜ, ಪದ್ಯಾಣ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಶ್ಯಾಮ್, ರಾಧಾಕೃಷ್ಣ ನಾಯಕ್ ಸಹಿತ ಪ್ರಮುಖರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ದೇವಸ್ಥಾನದ ಬ್ರಹ್ಮಕಲಶ ಪ್ರಯುಕ್ತ ಭರತಖಂಡದ ಹನ್ನೊಂದು ಪುಣ್ಯ ನದಿಗಳಿಂದ ಪವಿತ್ರ ತೀರ್ಥ ಸಂಗ್ರಹಿಸಿ ನದಿಗಳ ತೀರ್ಥಗಳೊಂದಿಗೆ ಹಸಿರುವಾಣಿಯ ಶೋಭಾಯಾತ್ರೆ ನಡೆಯುತ್ತಿರುವುದು ಐತಿಹಾಸಿಕವಾದ ಪುಣ್ಯ ಕ್ಷಣ, ಸೇವೆಯಾಗಿದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಸನ್ನಿಧಿಯಲ್ಲಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ನಡೆದ ಭಜನೆ, ಸಾಮೂಹಿಕ ಪ್ರಾರ್ಥನೆ, ಸಂಗಮ ತೀರ್ಥ ಸಂಗ್ರಹ ಹಾಗೂ ಏಕದಶ ಕಲಶ ತೀರ್ಥ ರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಧಾರ್ಮಿಕ ವ್ಯವಸ್ಥೆಗೆ ದೇವಸ್ಥಾನ ದೊಡ್ಡ ಶಕ್ತಿಯಾಗಿದ್ದು, ತೀರ್ಥ ಮೆರವಣಿಗೆಯೂ ಧಾರ್ಮಿಕ ಕ್ಷೇತ್ರಕ್ಕೆ ಶಕ್ತಿಯಾಗಿದೆ ಎಂದು ಬಣ್ಣಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಶ್ಯಾಮ್ ಮಾತನಾಡಿ, ಪದ್ಯಾಣದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಎಲ್ಲೆಡೆಯ ಭಕ್ತರ ಸಹಕಾರ ಲಭಿಸುತ್ತಿರುವುದು ಸಂತಸದಾಯಕ ಬೆಳವಣಿಗೆ ಎಂದರು. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಶುಭಹಾರೈಸಿದರು.
ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ದೇವಿದಾಸ ರೈ, ಡಾ.ರಮ್ಯಾ ರಾಜಾರಾಮ್, ಪದ್ಯಾಣ ದೇವಸ್ಥಾನ ಸಮಿತಿ ಅಧ್ಯಕ್ಷ ಸತ್ಯ ನಾರಾಯಣ ಭಟ್, ಪದಾಧಿಕಾರಿಗಳಾದ ಕೃಷ್ಣ ಎಂ.ಆರ್., ಬಾಬು ನಾಕ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನೀಲ್‌ಕುಮಾರ್ ದಡ್ಡು, ಪ್ರಮುಖರಾದ ಸುರೇಶ್ ಅತ್ರಮಜಲು, ರಾಮಚಂದ್ರ ಮಣಿಯಾನಿ, ವಿದ್ಯಾಧರ ಜೈನ್, ಕೈಲಾರ್ ರಾಜಗೋಪಾಲ್ ಭಟ್, ರವೀಂದ್ರ ಇಳಂತಿಲ, ಮಹೇಶ್ ಬಜತ್ತೂರು, ಪ್ರಶಾಂತ್ ಪೆರಿಯಡ್ಕ, ಎನ್. ರಾಘವೇಂದ್ರ ನಾಯಕ್, ಕಂಗ್ವೆ ವಿಶ್ವನಾಥ ಶೆಟ್ಟಿ, ಹೇರಂಭ ಶಾಸ್ತ್ರಿ, ಸುಜಾತಕೃಷ್ಣ ಆಚಾರ್ಯ, ರಾಜಶೇಖರ್ ರೈ ಕರಾಯ, ಶ್ಯಾಮ್ ಸುದರ್ಶನ್, ಜಯಂತ ಪೊರೋಳಿ ಮತ್ತಿತರರು ಉಪಸ್ಥಿತರಿದ್ದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಆ ಊರಿಗೆ ಸೀಮಿತ ಆಗಬಾರದು. ಅದರ ಪಾವಿತ್ರೃ ಮತ್ತು ಪುಣ್ಯ ಎಲ್ಲೆಡೆಯ ಜನತೆಗೂ ದೊರಕುವಂತಾಗಬೇಕು.ಶೋಕ್ ಕುಮಾರ್ ರೈ ಶಾಸ

ರಥಯಾತ್ರೆಗೆ ಹಲವೆಡೆ ಅದ್ದೂರಿ ಸ್ವಾಗತ

ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಕಾದಶ ಕಲಶ ತೀರ್ಥ ರಥ, ಹೊರೆಕಾಣಿಕೆ ಮೆರವಣಿಗೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪ್ರಮುಖರಾದ ಡಾ.ಪ್ರಸಾದ್ ಭಂಡಾರಿ, ಶಿವಕುಮಾರ್ ಕಳ್ಳಿಮಾರ್, ಗೋಪಾಲಕೃಷ್ಣ ಹೇರಳೆ ಮತ್ತಿತರರು ಇದ್ದರು. ವಿಟ್ಲ ಮೇಗಿನಪೇಟೆಯಲ್ಲಿ ಸ್ವಾಗತಿಸಿದ ಬಳಿಕ ಮೆರವಣಿಗೆಯು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗಕ್ಕೆ ಆಗಮಿಸಿತು. ರಥಕ್ಕೆ ಗಂಗಾರತಿ, ಪೂಜೆಗಳು ನೆರವೇರಿದವು. ಪ್ರಮುಖರಾದ ಕೃಷ್ಣಯ್ಯ ಕೆ., ಜಯರಾಮ ಬಲ್ಲಾಳ್, ಕರುಣಾಕರ ನಾಯ್ತಟ್ಟು, ನರಸಿಂಹ ಮಾಣಿ, ಅರುಣ್ ವಿಟ್ಲ ಉಪಸ್ಥಿತರಿದ್ದರು. ಕನ್ಯಾನದಲ್ಲಿ ಸ್ವಾಗತಗೊಂಡ ಬಳಿಕ ಮಿತ್ತನಡ್ಕ ದೈವಸ್ಥಾನದ ಮುಂಭಾಗದಿಂದ ಹೊರೆಕಾಣಿಕೆ ಮೆರವಣಿಗೆ ಪದ್ಯಾಣ ಕ್ಷೇತ್ರಕ್ಕೆ ಆಗಮಿಸಿತು.\

ಒಂದು ಊರಿನ ದೇವಸ್ಥಾನದ ಬ್ರಹ್ಮಕಲಶ ಆ ಊರಿಗೆ ಸೀಮಿತ ಆಗಬಾರದು. ಅದರ ಪಾವಿತ್ರೃ ಮತ್ತು ಪುಣ್ಯ ಎಲ್ಲೆಡೆಯ ಜನತೆಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಈಶ್ವರ ಕ್ಷೇತ್ರದ ಸಂದೇಶ ಪದ್ಯಾಣ ಕ್ಷೇತ್ರದ ಮೂಲಕ ಎಲ್ಲೆಡೆ ಪಸರಿಸಲಿ.

-----ಪೋಟೋ----
*ಯುಪಿಪಿ_ ಮಾರ್ಚ್ 30-1
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಸನ್ನಿಧಿಯಿಂದ ಪದ್ಯಾಣ ದೇವಸ್ಥಾನದ ಬ್ರಹ್ಮಕಲಶಕ್ಕೆ ಹೊರಟ ಏಕಾದಶ ಕಲಶ ತೀರ್ಥ ರಥ ಯಾತ್ರೆಗೆ ಮಾಣಿಲದ ಮೋಹನದಾಸ ಪರಮಹಂಸ ಶ್ರೀಗಳು ಚಾಲನೆ ನೀಡಿದರು. ಶಾಸಕರಾದ ಅಶೋಕ್‌ಕುಮಾರ್ ರೈ, ಹರೀಶ್ ಪೂಂಜ, ಪದ್ಯಾಣ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಶ್ಯಾಮ್, ರಾಧಾಕೃಷ್ಣ ನಾಯಕ್ ಸಹಿತ ಪ್ರಮುಖರಿದ್ದರು.
*ಯುಪಿಪಿ_ ಮಾರ್ಚ್ 30-1
ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಸನ್ನಿಧಿಯಿಂದ ಪದ್ಯಾಣ ದೇವಸ್ಥಾನದ ಬ್ರಹ್ಮಕಲಶಕ್ಕೆ ಹೊರಟ ಏಕಾದಶ ಕಲಶ ತೀರ್ಥಗಳಿಗೆ ಗಂಗಾರತಿ ನೆರವೇರಿತು.
**********
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net