ಅಹಿಂಸಾ ತತ್ವ ಪಾಲಿಸುವ ಹಿಂದೂ ಧರ್ಮ

 ಶರವೂರು ದೇವಸ್ಥಾನ ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆರ್ಶೀವಚನ ನೀಡಿದರು. ಪ್ರಮುಖರಾದ  ಕೆ.ಸುಬ್ರಹ್ಮಣ್ಯ ರಾವ್, ಡಾ.ಮಮತಾ ಪಿ.ಶೆಟ್ಟಿ, ಸುದರ್ಶನ ರೈ, ವಿಠಲ ರೈ ಮತ್ತಿತರರು ಉಪಸ್ಥಿತರಿದ್ದರು.
ಶರವೂರು ದೇವಸ್ಥಾನ ಬ್ರಹ್ಮಕಲಶ ಧಾರ್ಮಿಕ ಸಭೆಯಲ್ಲಿ ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆರ್ಶೀವಚನ ನೀಡಿದರು. ಪ್ರಮುಖರಾದ ಕೆ.ಸುಬ್ರಹ್ಮಣ್ಯ ರಾವ್, ಡಾ.ಮಮತಾ ಪಿ.ಶೆಟ್ಟಿ, ಸುದರ್ಶನ ರೈ, ವಿಠಲ ರೈ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಡಬ
ದೇವಾಲಯಗಳು ಸನಾತನ ಹಿಂದೂ ಧರ್ಮದ ಬದ್ಧತೆ ಮೂಲಕ ಸಮಾಜಕ್ಕೆ ಬಹಳಷ್ಟು ರೀತಿಯ ಕೊಡುಗೆಗಳನ್ನು ನೀಡುತ್ತಾ ಬಂದಿವೆ. ತ್ಯಾಗ, ಸಮರ್ಪಣಾ ಸೇವಾ ಮನೋಭಾವದೊಂದಿಗೆ ಯಾರ ಮನಸ್ಸಿಗೂ ನೋವಾಗದಂತೆ, ಯಾವ ಜೀವಿಗೂ ಹಿಂಸೆಯಾಗದ ರೀತಿಯಲ್ಲಿ ಹಿಂದೂ ಧರ್ಮ ಸಾಗಿ ಬಂದ ಇತಿಹಾಸವಿದೆ ಎಂದು ಶ್ರೀಧಾಮ ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಳ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶರವೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸದ್ದರು. ಭದ್ರತಾ ಕೊಠಡಿ ಉದ್ಘಾಟಿಸಿದ ಡಾ.ಮಮತಾ ಪಿ.ಶೆಟ್ಟಿ, ಮಂಗಳೂರಿನ ಉದ್ಯಮಿ ಸುದರ್ಶನ ರೈ ಮನವಳಿಕೆಗುತ್ತು, ನಿವೃತ್ತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ಮಾಜಿ ಸಚಿವ ಎಸ್.ಅಂಗಾರ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಸವಣೂರು ಸೀತಾರಾಮ ರೈ, ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಎ.ಬಾಬು ನಾಯ್ಕ ಉಪಸ್ಥಿತರಿದ್ದರು.
ಅಭಿವೃದ್ಧಿ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು ಸ್ವಾಗತಿಸಿದರು. ಕಡಬ ಉಪ ತಹಸೀಲ್ದಾರ್ ಜಿ.ಗೋಪಾಲ ವಂದಿಸಿದರು. ಗಣರಾಜ ಕುಂಬ್ಳೆ ನಿರೂಪಿಸಿದರು. ಶಿಕ್ಷಕ ಚಂದ್ರಹಾಸ ಕೆ.ಸಿ., ಉಪನ್ಯಾಸಕ ಜನಾರ್ದನ ಪ್ರಶಾಂತ್ ರೈ ಮನವಳಿಕೆ ಸಹಕರಿಸಿದರು.
ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ ಆರಿಕೋಡಿ ಹೊರೆಕಾಣಿಕೆ ಮೆರವಣಿಗೆ ಉದ್ಘಾಟಿಸಿದರು. ಹೊರೆಕಾಣಿಕೆ ಸಮಿತಿ ಸಂಚಾಲಕ ಜನಾರ್ದನ ಗೌಡ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ದೇವಳದ ಮಹಾದ್ವಾರವನ್ನು ಕುಡುಪು ನರಸಿಂಹ ತಂತ್ರಿ, ರಾಜಗೋಪುರ ಉದ್ಘಾಟನೆ ಹಾಗೂ ಉಗ್ರಾಣ ಮುಹೂರ್ತವನ್ನು ಮಾಣಿಲ ಸ್ವಾಮೀಜಿ ನೆರವೇರಿಸಿದರು. ಅಲಂಕಾರ ಸಮಿತಿ ವತಿಯಿಂದ ಕೊಡಮಾಡಿದ ಆಂಬುಲೆನ್ಸ್ ಅನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಲೋಕಾರ್ಪಣೆ ಮಾಡಿದರು.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಪಡ್ಡಿಲ್ಲಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ, ಪವಿತ್ರಪಾಣಿ ಎನ್.ಹರೀಶ್ ಆಚಾರ್ಯ ನಗ್ರಿಗುತ್ತು, ಪ್ರಮುಖರಾದ ಮತ್ತಪ್ಪ ಪೂಜಾರಿ, ವಿಠಲ್ ರೈ ಕೊಣಾಲುಗುತ್ತು, ದಯಾನಂದ ರೈ ಮನವಳಿಕೆಗುತ್ತು, ಅಜಿತ್ ಮನವಳಿಕೆಗುತ್ತು, ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು, ವ್ಯವಸ್ಥಾಪನಾ ಸಮಿತಿ ಸದಸ್ಯರು, ವಿವಿಧ ಸಮಿತಿಗಳ ಪದಾಧಿಕಾರಿಗಳು ಇದ್ದರು. ಶಿಕ್ಷಕ ಚಂದ್ರಹಾಸ ಕುಂಟ್ಯಾನ ನಿರೂಪಿಸಿದರು.

ಪೂರ್ಣಕುಂಭ ಸ್ವಾಗತ

ಬೆಳಗ್ಗೆ ಕ್ಷೇತ್ರದ ತಂತ್ರಿಗಳಿಗೆ ಮತ್ತು ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಶಿಲ್ಪಿಗೆ ಸನ್ಮಾನ, ಆಲಯ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಭದ್ರಕಾಳಿ ಅಮ್ಮನವರಲ್ಲಿ ಕ್ಷಾಳನಾದಿ ಬಿಂಬ ಶುದ್ಧಿ, ಪ್ರಾಯಶ್ಚಿತ್ತ ಹೋಮ ನಡೆಯಿತು. ಸಂಜೆ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಹೊರಕಾಣಿಕೆ ಸಮರ್ಪಣೆ

ಬ್ರಹ್ಮಕಲಶಕ್ಕೆ ವಿವಿಧ ಭಾಗದ ಭಕ್ತರು ಹೊರೆಕಣಿಕೆ ಸಮರ್ಪಿಸಿದರು. ಕೊಲ, ರಾಮಕುಂಜ, ಹಳೆನೇರೆಂಕಿ, ಪೆರಾಬೆ, ಆಲಂಕಾರು, ಕುಂತೂರು, ಕುದ್ಮಾರು, ಸವಣೂರು, ಕಾಣಿಯೂರು, ಚಾರ್ವಾಕ ಗ್ರಾಮಗಳಿಂದ ಆಗಮಿಸಿದ ಭಕ್ತರು ಆಲಂಕಾರು ಪೇಟೆ ಮುಖ್ಯದ್ವಾರದ ಬಳಿ ಸೇರಿ ಮೆರವಣಿಗೆಯಲ್ಲಿ ಸಾಗಿದರು. ಮಹಿಳೆಯರ ಕುಣಿತ ಭಜನೆ, ಪೂರ್ಣಕುಂಭ ಸ್ವಾಗತ, ನಾಸಿಕ್ ಬ್ಯಾಂಡ್, ಸಿಂಗಾರಿ ಮೇಳದ ಚೆಂಡೆ, ಚೆಂಡೆ ಪ್ರದರ್ಶನ, ಟ್ಯಾಬ್ಲೋ, ಯಕ್ಷಗಾನ, ಪೌರಾಣಿಕ ವೇಷಗಳು, ಛತ್ರಿ, ಚಾಮರ, ಕೊಂಬು ವಾಲಗ ಮೆರವಣಿಗೆಗೆ ಮೆರುಗು ನೀಡಿದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net