ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ

ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿಜಯ್​ ಕೊಡವೂರು ಮಾತನಾಡಿದರು. ಟಿ.ಜಿ. ಹೆಗ್ಡೆ, ಅಜೇಯ್​ ಪಿ. ಶೆಟ್ಟಿ, ಸುಜಿತ್​ ಕೊಡವೂರು, ಡಾ.ಎಂ.ಆರ್​. ಪೈ, ರವಿ ಅಮೀನ್​, ಉದಯ್​ ಕೊಡವೂರು, ವಿಠ್ಠಲ್​ ಶೆಟ್ಟಿ, ಭುಜಂಗ ಶೆಟ್ಟಿ, ಗಣೇಶ್​ ಗುರಿಕಾರ, ಉದಯ ಮಠದ ಬೆಟ್ಟು, ಸುಜಾತಾ ಇತರರಿದ್ದರು.
ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿಜಯ್​ ಕೊಡವೂರು ಮಾತನಾಡಿದರು. ಟಿ.ಜಿ. ಹೆಗ್ಡೆ, ಅಜೇಯ್​ ಪಿ. ಶೆಟ್ಟಿ, ಸುಜಿತ್​ ಕೊಡವೂರು, ಡಾ.ಎಂ.ಆರ್​. ಪೈ, ರವಿ ಅಮೀನ್​, ಉದಯ್​ ಕೊಡವೂರು, ವಿಠ್ಠಲ್​ ಶೆಟ್ಟಿ, ಭುಜಂಗ ಶೆಟ್ಟಿ, ಗಣೇಶ್​ ಗುರಿಕಾರ, ಉದಯ ಮಠದ ಬೆಟ್ಟು, ಸುಜಾತಾ ಇತರರಿದ್ದರು.
Published on

* ನಗರಸಭಾ ಮಾಜಿ ಸದಸ್ಯ ವಿಜಯ ಕೊಡವೂರು ಅನಿಸಿಕೆ

ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ, ವಂದೇ ಮಾತರಂ ಗೀತೆಯ 150ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಉದ್ದೇಶ ಹಿಂದೂ ಸಮಾಜದ ಎಲ್ಲ ಬಾಂಧವರೂ ಒಗ್ಗಟ್ಟಾಗಿ ಇರಬೇಕು ಎನ್ನುವುದು ಇದರ ಉದ್ದೇಶ. ಸನಾತನ ಹಿಂದೂ ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಒಟ್ಟಾಗಿ ಕೆಲಸ ಮಾಡೋಣ ಎಂದು ನಗರಸಭಾ ಮಾಜಿ ಸದಸ್ಯ ವಿಜಯ್​ ಕೊಡವೂರು ಕರೆ ನೀಡಿದರು.
ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನ ವಠಾರ ಶಿರಿಬೀಡುನಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಉಡುಪಿ ನಗರ, ಶಿರಿಬೀಡು ಮತ್ತು ಬನ್ನಂಜೆ ವಾರ್ಡ್​ ವತಿಯಿಂದ ಭಾನುವಾರ (ಫೆ.1) ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಠದ ಬೆಟ್ಟುನಿಂದ ಆರಂಭಗೊಂಡ ಹಿಂದೂ ಸಂಗಮ ಕಾರ್ಯಕ್ರಮದ ನಿಮಿತ್ತ ಭಾರತಮಾತೆಯ ಶೋಭಾಯಾತ್ರೆಗೆ ಶಂಕರ ನಾರಾಯಣ ದೇವಳದ ಎದುರು ಚಾಲನೆ ನೀಡಲಾಯಿತು. ಶಾಸಕ ಯಶ್​ಪಾಲ್​ ಸುವರ್ಣ ಪಾಲ್ಗೊಂಡು ಶುಭ ಹಾರೈಸಿದರು.
ಶೋಭಾಯಾತ್ರೆಯಲ್ಲಿ ನಾಸಿಕ್​ ಬ್ಯಾಂಡ್​, ಕಲಶ ಹಿಡಿದ ಮಾತೆಯರು, ಯಕ್ಷಗಾನ ಟ್ಯಾಬ್ಲೋ, ಮಹಿಳಾ ಚಂಡೆ, ಕುಣಿತ ಭಜನಾ ತಂಡ, ರಾಮ, ಲಕ್ಷ್ಮಣ, ಸೀತೆ, ಹನುಮಂತನ ಟ್ಯಾಬ್ಲೋ, ಛತ್ರಪತಿ ಶಿವಾಜಿ, ಸಿಂಗಾರಿ ಮೇಳ ಚಂಡೆ ವಾದನ ಗಮನ ಸೆಳೆಯಿತು. ಸಿಟಿ ಬಸ್​ ನಿಲ್ದಾಣ, ಬನ್ನಂಜೆ, ಎಸ್ಪಿ ಕಚೇರಿ, ಬಾಲಭವನದ ಮುಂದೆ ಸಾಗಿ ಬಂದು ಪುಳಿಮಾರು ಬಬ್ಬುಸ್ವಾಮಿ ದೈವಸ್ಥಾನದ ವಠಾರದಲ್ಲಿ ಧಾರ್ಮಿಕ ಸಭೆ ನಡೆಯಿತು.
ವೇದಿಕೆಯಲ್ಲಿ ಧಾರ್ಮಿಕ ಚಿಂತಕರಾದ ಅಜೇಯ್​ ಪಿ. ಶೆಟ್ಟಿ, ಸುಜಿತ್​ ಕೊಡವೂರು, ಡಾ.ಎಂ.ಆರ್​. ಪೈ, ರವಿ ಅಮೀನ್​, ವಿಠ್ಠಲ್​ ಶೆಟ್ಟಿ, ಭುಜಂಗ ಶೆಟ್ಟಿ, ಗಣೇಶ್​ ಗುರಿಕಾರ, ಉದಯ ಮಠದ ಬೆಟ್ಟು, ಸುಜಾತಾ ಇತರರಿದ್ದರು. 
ಶಿರಿಬೀಡು ವಾರ್ಡ್​ನ ನಗರಸಭಾ ಮಾಜಿ ಸದಸ್ಯ ಟಿ.ಜಿ. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಬನ್ನಂಜೆ ವಾರ್ಡ್​ನ ಹರೀಶ್​ ರಾಮ್​, ಮಹೇಶ್​ ಪೂಜಾರಿ, ಉದಯ್​ ಕೊಡವೂರು, ಸಚಿನ್​, ಸುರೇಶ್​ ಶೇರಿಗಾರ್​, ಸಂದೀಪ್​ ಶೆಟ್ಟಿಗಾರ್​, ಆನಂದ್​ ಸುವರ್ಣ, ಮನೀಶ್​ ಶೆಟ್ಟಿ, ಅಕ್ಷಯ್​ ಶೆಟ್ಟಿ, ಅಭಿಷೇಕ್​, ಸಮಿತಿಯ ಪದಾಧಿಕಾರಿಗಳು, ವಾರ್ಡ್​ನ ಸಮಿತಿಯ ಸದಸ್ಯರು ಉಪಸ್ಥರಿದ್ದರು.
ಮೋಹನ್​ ಶೆಟ್ಟಿ ಸ್ವಾಗತಿಸಿದರು. ಸಂದೀಪ್​ ವಂದಿಸಿದರು. ದೀಪಕ್​ ನಿರೂಪಿಸಿದರು. ಬನ್ನಂಜೆ ಮಾಸ್ಟರ್​ ಡ್ರಾಮಾ ತಂಡದವರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net