ಹಿಂದೂಗಳು ಸಂಟಿತರಾಗಿದ್ದರೆ ಭವಿಷ್ಯದಲ್ಲಿ ಆಪತ್ತು

ಕೋಟದಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಾಗ್ಮಿ ಕವಿತಾ ಆಚಾರ್ಯ ಮುದೂರು ಮಾತನಾಡಿದರು. ಆನಂತಪದ್ಮನಾಭ ಐತಾಳ, ಸತೀಶ್ ಕುಂದರ್, ಪ್ರಶಾಂತ್ ಕುಂದರ್ ಇದ್ದರು.
ಕೋಟದಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಾಗ್ಮಿ ಕವಿತಾ ಆಚಾರ್ಯ ಮುದೂರು ಮಾತನಾಡಿದರು. ಆನಂತಪದ್ಮನಾಭ ಐತಾಳ, ಸತೀಶ್ ಕುಂದರ್, ಪ್ರಶಾಂತ್ ಕುಂದರ್ ಇದ್ದರು.
Published on
ಕೋಟ: ಹಿಂದೂಗಳು ಮೈಮರೆತು ಸಂಟಿತರಾಗದಿದ್ದರೆ ಭವಿಷ್ಯದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ. ಆದ್ದರಿಂದ ನಮ್ಮಯುವ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರದ ಕುರಿತು ತಿಳುವಳಿಕೆ ಮೂಡಿಸಬೇಕು ಎಂದು ವಾಗ್ಮಿ ಕವಿತಾ ಆಚಾರ್ಯ ಮುದೂರು ತಿಳಿಸಿದರು.
ಕೋಟದಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಸಂಟನೆ ಪ್ರಮುಖರಾದ ಬೆಳ್ವೆ ಗಣೇಶ್ ಕಿಣಿ ವಾತನಾಡಿ, ಹಿಂದೂಗಳಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸಂಟನೆ ಬಲಪಡಿಸುವ ಸಲುವಾಗಿ ಈ ಸಮಾವೇಶ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಕೋಟ ಹಿರೇಮಹಾಲಿಂಗಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂತಪದ್ಮನಾಭ ಐತಾಳ, ಮಣೂರು ಮಹಾಲಿಂಗೇಶ್ವರ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಕುಂದರ್, ಉದ್ಯಮಿ ಪ್ರಶಾಂತ್ ಕುಂದರ್ ಇದ್ದರು. ಸಂಟನೆಯ ಪ್ರಸಾದ್ ಬಿಲ್ಲವ ಸ್ವಾಗತಿಸಿದರು. ರಂಜಿತ್ ಬಾರಿಕೆರೆ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net