ಹಿಂದೂ ಸಂಘಟನೆ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿರ್ಬಂಧ

ಪುನೀತ್​ ಅತ್ತಾವರ
ಪುನೀತ್​ ಅತ್ತಾವರ
Published on
ಉಡುಪಿ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಯ್ದುಕೊಳ್ಳುವ ಮುನ್ನೆಚ್ಚರಿಕಾ ಕ್ರಮವಾಗಿ ಹಿಂದೂ ಸಂಘಟನೆ ಇಬ್ಬರು ಮುಖಂಡರಿಗೆ 3 ತಿಂಗಳು ಉಡುಪಿ ಜಿಲ್ಲೆಯಾದ್ಯಂತ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ದ.ಕ. ಜಿಲ್ಲೆಯ ನರಸಿಂಹ ಮಾಣಿ ಇವರಿಗೆ ಆಗಸ್ಟ್​ 13 ರಿಂದ ನ. 12 ರವರೆಗೆ ಹಾಗೂ ಮಂಗಳೂರಿನ ಪುನೀತ್​ ಅತ್ತಾವರ ಇವರಿಗೆ ಆ. 14 ರಿಂದ ನ. 13ರವರೆಗೆ ಜಿಲ್ಲೆಗೆ ಪ್ರವೇಶ ನಿಷೇಧಿಸಲಾಗಿದೆ.
ಹಿಂದೂ ಸಂಘಟನೆಗಳು ಕೆಂಡ
ಕಾಪು ಪ್ರಖಂಡದ ಬಜರಂಗದಳದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಬಜರಂಗದಳದ ಪ್ರಮುಖರಾದ ಪುನೀತ್​ ಅತ್ತಾವರ ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರನ್ನು ಉಡುಪಿ ಜಿಲ್ಲೆ ಪ್ರವೇಶಿಸದಂತೆ ನಿರ್ಭಂಧ ಹೇರಿರುವ ಜಿಲ್ಲಾಡಳಿತದ ಕ್ರಮ ಅತ್ಯಂತ ಖಂಡನೀಯ. ದೇಶ ವಿಭಜನೆಯ ಇತಿಹಾಸವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆ ಮುಖಂಡರನ್ನು ನಿರ್ಬಂಧಿಸಿ ಹಿಂದೂಗಳ ಧ್ವನಿ ಅಡಗಿಸಲು ಪ್ರಯತ್ನಿಸುವುದು ಮೂರ್ಖತನ.ತಕ್ಷಣಕ್ಕೆ ನಿರ್ಬಂಧಗಳನ್ನು ಹಿಂದೆ ಪಡೆಯಬೇಕು ಎಂದು ವಿಶ್ವ ಹಿಂದೂ ಪರಿಷತ್ತಿನ ಉಡುಪಿ ಜಿಲ್ಲಾ ಕಾರ್ಯಧ್ಯಕ್ಷ ಸುನಿಲ್​ ಕೆ.ಆರ್​. ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನಲ್ಲಿ ಆಯೋಜನೆಗೊಂಡಿದ್ದು, ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಬೇಕಿದ್ದ ನರಸಿಂಹ ಮಾಣಿ ಅವರಿಗೆ ಜಿಲ್ಲೆಗೆ ನಿರ್ಬಂಧ ಹೇರಿರುವ ಜಿಲ್ಲಾಡಳಿತ ವಾಕ್​ ಸ್ವಾತಂತ್ರ್ಯವನ್ನು ದಮನಿಸುತ್ತಿದ್ದು, ರಾಜ್ಯ ಕಾಂಗ್ರೆಸ್​ ಸರ್ಕಾರದ ಮಾನಸಿಕತೆಯು ಬ್ರಿಟಿಷರ ಮಾನಸಿಕತೆಯನ್ನು ಬಿಂಬಿಸುವಂತಿದೆ ಎಂದು ಹಿಂದು ಜಾಗರಣ ವೇದಿಕೆ ಪ್ರಾಂತ ಸಹ ಸಂಚಾಲಕ ಮಹೇಶ್​ ಕಡಗದಾಳು ಆಕ್ರೋಶವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net