ಉಡುಪಿಜಿಲ್ಲೆಯಲ್ಲಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಹಿಂದೂ ಜನಜಾಗೃತಿ ಸಮಿತಿ ಮನವಿ ಸಲ್ಲಿಸಿತು. ಬಾಲಕೃಷ್ಣ ನಾಯಕ, ಪ್ರಕಾಶ್, ಹರಿಪ್ರಸಾದ್, ರಾಮಣ್ಣ, ಶೇಷಪ್ಪ ಕೋಟ್ಯಾನ್, ಡಾ. ಮಾರುತಿ ಶ್ಯಾನಭಾಗ್, ದಿನೇಶ್ ಪೂಜಾರಿ ಇತರರಿದ್ದರು.
Published on:
Copied
Follow Us
* ಜಿಲ್ಲಾ ಸಮನ್ವಯಕಾರ ಬಾಲಕೃಷ್ಣ ನಾಯಕ ಒತ್ತಾಯ
* ಜಿಲ್ಲಾಡಳಿತಕ್ಕೆ ಹಿಂದೂ ಜನಜಾಗೃತಿ ಸಮಿತಿ ಮನವಿ
ಉಡುಪಿ: ನಮ್ಮ ರಾಷ್ಟ್ರಧ್ವಜವು ದೇಶದ ಭಾವೈಕ್ಯದ ಸಂಕೇತವಾಗಿದೆ. ಆ.15 ಮತ್ತು ಜ.26ರಂದು ಹೆಮ್ಮೆಯಿಂದ ಧ್ವಜಾರೋಹಣ ಮಾಡುತ್ತೇವೆ. ಆದರೆ, ಈ ದಿನಗಳಂದು ಸಣ್ಣ ಸಣ್ಣ ಅಳತೆಯ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳು ಮಾರಾಟಗೊಳ್ಳುತ್ತವೆ. ಮಾರನೆಯ ದಿನ ಅವು ಕಸವಾಗಿ ಚರಂಡಿಗಳಲ್ಲಿ ಕಾಣಸಿಗುತ್ತವೆ. ಇದು ಧ್ವಜಕ್ಕೆ ಮಾಡುವ ಅಪಮಾನವಾಗಿದ್ದು, ಪರಿಸರ ನಾಶಕ್ಕೂ ಕಾರಣವಾಗಿದೆ. ಹೀಗಾಗಿ ಪ್ಲಾಸ್ಟಿಕ್ನಿಂದ ರಾಷ್ಟ್ರಧ್ವಜದ ತಯಾರಿಕೆ ಹಾಗೂ ಮಾರಾಟ ನಿಯಂತ್ರಿಸಿ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕಾರ ಬಾಲಕೃಷ್ಣ ನಾಯಕ ಒತ್ತಾಯಿಸಿದರು.
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕಾಗುವ ಅಪಮಾನ ತಡೆಗಟ್ಟಲು ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠ ಹಾಗೂ ಜಿಲ್ಲೆಯೆ ಎಲ್ಲ ತಾಲೂಕುಗಳ ತಹಸೀಲ್ದಾರರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಸಲ್ಲಿಸಿ ಮಾತನಾಡಿದರು.
ಸಂವಿಧಾನಬಾಹಿರ ಕಾರ್ಯ
ಪ್ಲಾಸ್ಟಿಕ್ನಿಂದ ಬಾವುಟ ತಯಾರಿಸಿ ಅಪಮಾನ ಮಾಡುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಸಹ ಆದೇಶ ನೀಡಿದೆ. ಕೇಂದ್ರ, ರಾಜ್ಯ ಗೃಹ ಇಲಾಖೆಗಳು ಹಾಗೂ ಶಿಕ್ಷಣ ಇಲಾಖೆಗಳೂ ಸುತ್ತೋಲೆ ಹೊರಡಿಸಿದ್ದವು. ಆದರೂ ಪ್ಲಾಸ್ಟಿಕ್ ಧ್ವಜಗಳ ಮಾರಾಟ ಸಂವಿಧಾನಬಾಹಿರವಾಗಿ ಇನ್ನೂ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳಿಂದ ದೇಶದ ಬಾವುಟಕ್ಕೆ ಅಪಮಾನ ಅಥವಾ ಅನಾದರದಂತ ಕೃತ್ಯ ನಡೆಯದಂತೆ ತಡೆಯಲು ಜಿಲ್ಲಾ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಅನೇಕ ಶಾಲಾ-ಕಾಲೇಜುಗಳಿಗೆ ಮನವಿ ನೀಡಲಾಯಿತು.
ಸಮಿತಿಯ ಧರ್ಮಪ್ರೇಮಿ ಬಂಧುಗಾಳದ ಪ್ರಕಾಶ್, ಹರಿಪ್ರಸಾದ್, ರಾಮಣ್ಣ, ಶೇಷಪ್ಪ ಕೋಟ್ಯಾನ್, ಡಾ. ಮಾರುತಿ ಶ್ಯಾನಭಾಗ್, ದಿನೇಶ್ ಪೂಜಾರಿ ಇತರರಿದ್ದರು.