ಯುವಪೀಳಿಗೆಗೆ ಧಾರ್ಮಿಕ ಶಿಕ್ಷಣ ಅಗತ್ಯ

ಉಡುಪಿಯ ಸಂತೆಕಟ್ಟೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನಡೆಯಿತು. ಈಶವಿಠ್ಠಲದಾಸ ಸ್ವಾಮೀಜಿ, ಶಂಕರ್​ ಶೆಟ್ಟಿ ಪುತ್ತೂರು, ವಿನೋದ್​ ಕುಮಾರ್​, ಮುರಳಿ ಪೆರಂಪಳ್ಳಿ, ಸುಜಿತ್​ ಶೆಟ್ಟಿ ಕೆಳಾರ್ಕಳಬೆಟ್ಟು, ಶಿವಪ್ರಸಾದ್​ ಮಲೆಬೆಟ್ಟು, ಕಿಶೋರ್​ ಇದ್ದರು.

Published on

* ಈಶವಿಠ್ಠಲದಾಸ ಸ್ವಾಮೀಜಿ ಅನಿಸಿಕೆ

* ಉಡುಪಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ

ಉಡುಪಿ: ಜೀವನ ಪದ್ಧತಿಯಲ್ಲಿ ಎಲ್ಲರೂ ಅತಿಯಾಗಿ ಆಧುನಿಕತೆ ಅಳವಡಿಸಿಕೊಂಡಿದ್ದಾರೆ. ಅದರಿಂದಾಗಿ ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದು, ಸಮಾಜದಲ್ಲೂ ದುಷ್ಪರಿಣಾಮ ಉಂಟಾಗುತ್ತಿರುವುದು ದುರಂತ. ಹೀಗಾಗಿ ಇಂದಿನ ಯುವಪೀಳಿಗೆಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ಕೇಮಾರು ಸಾಂದೀಪನಿ ಮಠದ ಈಶವಿಠ್ಠಲದಾಸ ಸ್ವಾಮೀಜಿ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಸಂತೆಕಟ್ಟೆಯ ಗೋಪಾಲಪುರದ ಶೀರೂರು ಮಠದ ವಠಾರದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.
ಶಂಕರ್​ ಶೆಟ್ಟಿ ಪುತ್ತೂರು, ವಿನೋದ್​ ಕುಮಾರ್​, ಹಿಂದೂ ಸಂಗಮ ಉಡುಪಿ ನಗರ ಸಂಯೋಜಕ ಮುರಳಿ ಪೆರಂಪಳ್ಳಿ ಉಪಸ್ಥಿತರಿದ್ದರು. ಸುಜಿತ್​ ಶೆಟ್ಟಿ ಕೆಳಾರ್ಕಳಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಪ್ರಸಾದ್​ ಮಲೆಬೆಟ್ಟು ದಿಕ್ಸೂಚಿ ಭಾಷಣ ಮಾಡಿದರು. ಕಿಶೋರ್​ ಸ್ವಾಗತಿಸಿದರು. ಸಂದೇಶ್​ ಶೆಟ್ಟಿ ವಂದಿಸಿದರು. ಅಕ್ಷಯ್​ ಹೆಗ್ಡೆ ನಿರೂಪಿಸಿದರು. 
ಸಭಾ ಕಾರ್ಯಕ್ರಮದ ಬಳಿಕ ಮೇಘನಾ ಮತ್ತು ಮಂಜರಿ ಚಂದ್ರ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net