ಗುಡ್ಡ ಕುಸಿದು ಶೌಚಗೃಹದ ಗುಂಡಿಗೆ ಹಾನಿ

 ಅಡ್ಡಗದ್ದೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದಿರುವುದು.
ಅಡ್ಡಗದ್ದೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದಿರುವುದು.
Published on
ಕಡಬ: ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾಲೇಜು ರಸ್ತೆಯ ಅಡ್ಡಗದ್ದೆ ಎಂಬಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಪರಿಣಾಮ ಗುಡ್ಡದ ಮೇಲಿದ್ದ ಬಾಡಿಗೆ ಮನೆಯೊಂದರ ಶೌಚಗೃಹದ ಗುಂಡಿ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಜೋಸೆಫ್ ಎಂಬುವರಿಗೆ ಸೇರಿದ ಈ ಕಟ್ಟಡದಲ್ಲಿ ಒಟ್ಟು ಮೂರು ಬಾಡಿಗೆ ಮನೆಗಳಿದ್ದು, ಅಪಾಯಕಾರಿ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿವಾಸಿಗಳನ್ನು ತಕ್ಷಣವೇ ಬೇರೆಡೆಗೆ ತೆರಳುವಂತೆ ಸ್ಥಳೀಯ ಆಡಳಿತ ಸೂಚಿಸಿದೆ. ಮಳೆಯ ಪ್ರಮಾಣ ಹೆಚ್ಚಿರುವುದರಿಂದ ಕುಸಿದಿರುವ ಗುಡ್ಡದ ಮಣ್ಣು ಕೆಳಗಿರುವ ಕಟ್ಟಡದ ಮೇಲೆ ಬೀಳುವ ಸಾಧ್ಯತೆಯಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮ್ಮನಾ ಜಬೀನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net