ಸಹ್ಯಾದ್ರಿಯ ಗುಡ್ಡ ಬೆಟ್ಟಗಳಿಂದ ಹರಿದು ಬರುವ ಇಲ್ಲಿನ ಎಲ್ಲ ನದಿಗಳು ಸಾಮಾನ್ಯವಾಗಿ ಮೃಗಶಿರ ಮಳೆ ಬೀಳುವುದರೊಳಗೆ ಉಕ್ಕಿ ಹರಿಯುತ್ತವೆ. ಸೇತುವೆಯ ಎರಡು ಬದಿಗೆ ತುಂಬಿದ ಹೊಸ ಮಣ್ಣು ಸಡಿಲಗೊಂಡಲ್ಲಿ ಕುಸಿಯುವ ಭೀತಿಯಿದೆ. ಈಗಾಗಲೇ ಶಾಲೆ, ಕಾಲೇಜುಗಳು ಆರಂಭವಾಗಿದ್ದು, ಮಕ್ಕಳು ರಸ್ತೆ ದಾಟಿ ಮನೆ ಮುಟ್ಟುವವರೆಗೆ ತಾಯಂದಿರು ಆತಂಕದಿಂದ ಕಾಯುವಂತಾಗಿದೆ. ಬಹುತೇಕ ಎಲ್ಲ್ಲ ಸೇತುವೆಗಳ ಮೇಲೂ ವಿದ್ಯಾರ್ಥಿಗಳು ಸಂಚರಿಸಬೇಕಿದ್ದು, ಅಲ್ಲಲ್ಲಿ ಅಪೂರ್ಣ ಕಾಮಗಾರಿ ಪರಿಣಾಮ ಅಪಾಯ ಸಂಭವಿಸುವ ಮೊದಲು ಇಲಾಖೆ ಗಮನಹರಿಸಬೇಕಾಗಿದೆ.