ಗುತ್ತಿಗೆದಾರರು ಖಾಸಗಿ ಜಮೀನಿನಲ್ಲಿದ್ದ ಅಡಕೆ, ತೆಂಗಿನಮರಗಳನ್ನು ಕಡಿದು, ನೀರಾವರಿ ಪೈಪ್‌ಲೈನ್‌ಗಳನ್ನು ಹಾನಿಗೊಳಿಸಿದ್ದು, ಬೋರ್‌ವೆಲ್ ಮೇಲೆ ಮಣ್ಣು, ಕಲ್ಲು ತುಂಬಿಸಿ ಅದರ ಸುತ್ತ ಜಲ್ಲಿ ಹರಡಿದ್ದಾರೆ. ಈ ಜಾಗವು ರಾಷ್ಟ್ರೀಯ ಹೆದ್ದಾರಿಗೆ ನೋಟಿಫಿಕೇಶನ್ ಆಗಿಲ್ಲ, ಸ್ವಾಧೀನವೂ ಆಗಿಲ್ಲ. ಇದರಿಂದ ಆಸ್ತಿ ಹಕ್ಕಿಗೆ ಧಕ್ಕೆಯಾಗಿದ್ದು, ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.