ಮಂಜೇಶ್ವರ: ಪೈವಳಿಕೆ ಪಂಚಾಯಿತಿಯ ಬಾಯಾರಿನಲ್ಲಿ ಸೋಮವಾರ ಮುಂಜಾನೆ 3ರಿಂದ ಮಧ್ಯರಾತ್ರಿ ವರೆಗೆ (21 ಗಂಟೆಗಳಲ್ಲಿ) 121.5 ಮಿ.ಮೀ. ಮಳೆ ದಾಖಲಾಗಿದ್ದು, ರಾಜ್ಯದಲ್ಲೇ ಅಧಿಕ ಮಳೆ ಎಂದು ಐಎಂಡಿ ತಿಳಿಸಿದೆ.
ಐಎಂಡಿ ಪ್ರಕಾರ 24 ಗಂಟೆಯಲ್ಲಿ 60 ಮಿ.ಮೀ.ಗಿಂತ ಹೆಚ್ಚು ಮಳೆಯಾದರೆ ಅದನ್ನು ಭಾರಿ ಪ್ರಮಾಣದ ಮಳೆ ಎಂದು ಪರಿಗಣಿಸಲಾಗುತ್ತದೆ. ಮಂಗಳವಾರ ಬೆಳಗ್ಗೆ ವೇಳೆಗೆ ಮುವಾಟ್ಟುಪುಝ ಹಾಗೂ ತೋಡುಪುಝ ನದಿಗಳಲ್ಲಿ ಹರಿವಿನ ಪ್ರಮಾಣ ಇಳಿಕೆಯಾಗಿದ್ದರೂ ನದಿಗಳು ಅಪಾಯಮಟ್ಟದಲ್ಲೇ ಹರಿಯುತ್ತಿವೆ. ಕಳಿಯಾರ್ ನದಿಯಲ್ಲಿ ನೀರಿನ ಪ್ರಮಾಣ ಅಪಾಯ ಮಟ್ಟಕ್ಕಿಂತ ಕೆಳಗಿದೆ.