ಹೈನುಗಾರಿಕೆಯಿಂದ ಹೆಚ್ಚಿನ ಲಾಭ

ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಪ್ರಮುಖರಾದ ಸತೀಶ ಪೂಜಾರಿ, ಅಶ್ವಿನಿ, ಮಂದಾರ ಶೆಟ್ಟಿ, ಗೋವಿಂದ ನಾಯ್ಕ, ತೇಜಪ್ಪ ಶೆಟ್ಟಿ, ಉವಾಶಂಕರ ಶೆಟ್ಟಿ ಮತ್ತಿತರರಿದ್ದರು.
ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಪ್ರಮುಖರಾದ ಸತೀಶ ಪೂಜಾರಿ, ಅಶ್ವಿನಿ, ಮಂದಾರ ಶೆಟ್ಟಿ, ಗೋವಿಂದ ನಾಯ್ಕ, ತೇಜಪ್ಪ ಶೆಟ್ಟಿ, ಉವಾಶಂಕರ ಶೆಟ್ಟಿ ಮತ್ತಿತರರಿದ್ದರು.
Published on

ಕೊಕ್ಕರ್ಣೆ: ಹಾಲಿಗೆ ಯಾವುದೇ ರೀತಿಯ ವಸ್ತುಗಳನ್ನು ಸೇರಿಸದೆ ಇರುವುದರಿಂದ ಗುಣಮಟ್ಟ ಕಾಯ್ದುಕೊಳ್ಳಬಹುದು. ಸೂಕ್ತ ರೀತಿಯಲ್ಲಿ ಹೈನುಗಾರಿಕೆ ನಡೆಸಿದರೆ ಲಾಭದಾಯಕ ಎಂದು ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಅಶ್ವಿನಿ ಹೇಳಿದರು. ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂ

ದ ವಾರ್ಷಿಕ ಸಾ

ಮಾ

ನ್ಯ ಸಭೆಯಲ್ಲಿ ಮಾತನಾಡಿದರು.

ಸಂಘದ ಅಧ್ಯಕ್ಷ ಸತೀಶ ಪೂಜಾರಿ ಅಧ್ಯಕ್ಷತೆ ವಹಿಸಿ, ಪ್ರತಿದಿನ 500 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಮುಂದಿನ ದಿನಗಳಲ್ಲಿ 900 ಲೀಟರ್ ಸಂಗ್ರಹ ಗುರಿ ಇದೆ. ಇದರಿಂದ ಆರ್ಥಿಕ ಚಟುವಟಿಕೆ, ಕೃಷಿ ಅಭಿವೃದ್ಧಿಯತ್ತ ಹೈನುಗಾರರು ತೊಡಗಿಸಿಕೊಳ್ಳುವಂತಾಗಿದೆ ಎಂದರು.
2025-26ನೇ ಸಾಲಿನಲ್ಲಿ 5,17,702 ರೂ. ನಿವ್ವಳ ಲಾಭ ಗಳಿಸಿದ್ದು, ಹೈನುಗಾರರಿಗೆ ಶೇ.65ರಷ್ಟು ಬೋನಸ್ ವಿತರಿಸಲಾಯಿತು. ಸಂಘದ ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷ ಮಂದಾರ ಶೆಟ್ಟಿ, ನಿರ್ದೇಶಕರಾದ ಗೋವಿಂದ ನಾಯ್ಕ, ತೇಜಪ್ಪ ಶೆಟ್ಟಿ, ಉವಾಶಂಕರ ಶೆಟ್ಟಿ, ಕೃಷ್ಣ ನಾಯ್ಕ, ಸೀತಾರಾಮ ನಾಯ್ಕ, ಕಮಲಾ, ಸುಚಿತ್ರಾ ಶೆಟ್ಟಿ, ಭಾಗ್ಯಲಕ್ಷ್ಮೀ, ಜಯಶೀಲ ಶೆಟ್ಟಿ, ರೇವತಿ ಮತ್ತಿತರರು ಉಪಸ್ಥಿತರಿದ್ದರು. ಉಷಾ ನಾಯ್ಕ ಎಂ.ಆರ್. ಸ್ವಾಗತಿಸಿದರು. ಸಹಾಯಕಿ ಸುಜಿತಾ ವಂದಿಸಿದರು.

ಗೌರವ, ಸಹಾಯಧನ ವಿತರಣೆ

ಸಂಘಕ್ಕೆ ಅತಿಹೆಚ್ಚು ಹಾಲು ಪೂರೈಸಿದ ಸದಸ್ಯರಾದ ಶಾರದಾ, ಸೀತಾರಾಮ ನಾಯ್ಕ, ಗೋಪಾಲ ನಾಯ್ಕ ಅವರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಹೈನುಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಲ್ಲ ಸದಸ್ಯರಿಗೆ ಪ್ರೋತ್ಸಾಹಕ ಬಹುವಾನ ನೀಡಲಾಯಿತು. ಅನಾರೋಗ್ಯ ಪೀಡಿತ ಹೈನುಗಾರ ವಾಸು ನಾಯ್ಕ ಅವರಿಗೆ ಸಹಾಯಧನ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net