ಪ್ರಾಪಂಚಿಕ ಜ್ಞಾನವಿದ್ದರೆ ಉನ್ನತ ಹುದ್ದೆ

 ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್‌ನ ನೂತನ ವಿಭಾಗವನ್ನು ನವಮಂಗಳೂರು ಬಂದರು ಪ್ರಾಧಿಕಾರದ ಮಾಜಿ ಟ್ರಸ್ಟಿ ಭರತ್ ಕುಮಾರ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಕಿರಣ್ ಎಂ., ವಿಆರ್‌ಎಲ್ ಲಾಜಿಸ್ಟಿಕ್ಸ್‌ನ ಏರಿಯಾ ಮ್ಯಾನೇಜರ್ ಎಂ.ಬಿ ಪಾಟೀಲ್ ಮತ್ತಿತರರಿದ್ದರು.

Published on

ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪ್ರಾಪಂಚಿಕ ಜ್ಞಾನ, ಉತ್ತಮ ಕೌಶಲವನ್ನು ಹೊಂದಿದರೆ ಉನ್ನತ ಹುದ್ದೆ ಗಳಿಕೆ ಸಾಧ್ಯ ಎಂದು ನವಮಂಗಳೂರು ಬಂದರು ಪ್ರಾಧಿಕಾರ ಮಾಜಿ ಟ್ರಸ್ಟಿ ಭರತ್‌ಕುಮಾರ್ ಹೇಳಿದರು.

ಹಳೆಯಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್‌ನ ನೂತನ ವಿಭಾಗ ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಕಿರಣ್ ಎಂ. ಮಾತನಾಡಿ, ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಭರವಸೆಯ ಕ್ಷೇತ್ರವಾಗಿದ್ದು, ಇದರಲ್ಲಿ ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಾಲೇಜಿನ ಬಿಬಿಎ ವಿಭಾಗದಲ್ಲಿ ಈ ಹೊಸ ಕೋರ್ಸ್ ಪ್ರಾರಂಭಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಸರ್ಕಾರಿ ಕಾಲೇಜುಗಳ ಪೈಕಿ ಈ ಕೋರ್ಸ್ ನೀಡುತ್ತಿರುವ ಕೆಲವೇ ಕಾಲೇಜುಗಳಲ್ಲಿ ನಮ್ಮ ಕಾಲೇಜು ಕೂಡ ಒಂದಾಗಿದೆ ಎಂದರು.
ವಿಆರ್‌ಎಲ್ ಲಾಜಿಸ್ಟಿಕ್ಸ್‌ನ ಏರಿಯಾ ಮ್ಯಾನೇಜರ್ ಎಂ.ಬಿ.ಪಾಟೀಲ್ ಮಾತನಾಡಿದರು. ಬಿಬಿಎ ವಿಭಾಗದ ಮುಖ್ಯಸ್ಥ ಶರತ್ ಕುಮಾರ್ ಹಾರಾಡಿ ಮತ್ತು ಕಾಲೇಜಿನ ಅಧ್ಯಾಪಕ ವೃಂದ, ಪಾಲಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಮಾಹಿ, ಹಾಗೂ ಸ್ವಾತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net