ಉಜಿರೆ ಶ್ರೀ.ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಸ್ವಾಸ್ಥೃ ಸಂಕಲ್ಪ ಜಾಗೃತಿ ಅಭಿಯಾನ ನಡೆಯಿತು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ., ಮುಖ್ಯಶಿಕ್ಷಕಿ ವಿದ್ಯಾ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ಬೆಳ್ತಂಗಡಿ: ಯುವ ಜನತೆ ಕ್ಷುಲ್ಲಕ ಕಾರಣ, ಆತುರದ ನಿರ್ಧಾರ, ಸಹಪಾಠಿಗಳ, ಮಿತ್ರರ ಒತ್ತಾಯಕ್ಕೆ ಕಟ್ಟುಬಿದ್ದು, ದುಶ್ಚಟಕ್ಕೆ ಬಲಿಯಾಗಿ ಕ್ಷಣಿಕ ಸುಖಕ್ಕೆ, ಶಾಶ್ವತವಾದ ಸುಖ ಕಳೆದುಕೊಂಡು ಭವಿಷ್ಯ ಹಾಳು ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕು.
ಆರೋಗ್ಯಕರ ಜೀವನಶೈಲಿ ಸ್ವಚ್ಛತೆ ಮತ್ತು ನೈತಿಕ ಮೌಲ್ಯ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಉಜಿರೆ ಶ್ರೀ ಧ.ಮಂ.ಅ.ಹಿ.ಪ್ರಾಥಮಿಕ ಶಾಲೆ ನಿವೃತ್ತ ಮುಖ್ಯಶಿಕ್ಷಕ ಬಿ.ಸೋಮಶೇಖರ್ ಶೆಟ್ಟಿ ಕರೆ ನೀಡಿದರು.
ಉಜಿರೆ ಶ್ರೀ.ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಸ್ವಾಸ್ಥೃ ಸಂಕಲ್ಪ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು. ಮಾದಕ ವಸ್ತುಗಳಿಂದ ದೂರವಿರುತ್ತೇವೆಂದು ವಿದ್ಯಾರ್ಥಿಗಳು ಪ್ರಮಾಣ ಮಾಡಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ., ಮುಖ್ಯಶಿಕ್ಷಕಿ ವಿದ್ಯಾ ಕಿರಣ್ ಉಪಸ್ಥಿತರಿದ್ದರು. ರೆಡ್‌ಕ್ರಾಸ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸಲಾಯಿತು. ವಿದ್ಯಾರ್ಥಿ ಪೂಜಾ ನಿರ್ವಹಿಸಿದರು.