ಶಾರೀರ, ಶರೀರ ಸುಸ್ಥಿತಿಯಲ್ಲಿರಲು ಸಹಕಾರಿ

ಪಾರಂಪಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರುಗಿದ 23ನೇ ವರ್ಷದ ಕಾರ್ತಿಕ ಮಾಸದ ನಗರ ಭಜನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದೀಪ ಬೆಳಗಿಸಿ ಚಾಲನೆ ನೀಡಿದರು
ಪಾರಂಪಳ್ಳಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರುಗಿದ 23ನೇ ವರ್ಷದ ಕಾರ್ತಿಕ ಮಾಸದ ನಗರ ಭಜನೆಯನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ದೀಪ ಬೆಳಗಿಸಿ ಚಾಲನೆ ನೀಡಿದರು
Published on

ಕೋಟ:ಬ್ರಾಹ್ಮಣಮಹಾಸಭಾ ಸಾಲಿಗ್ರಾಮ ವಲಯದ ವತಿಯಿಂದಪಾರಂಪಳ್ಳಿ ಶ್ರೀ ಮಹಾವಿಷ್ಣುಭಜನಾ ಸಂಘ ಸಹಭಾಗಿತ್ವದಲ್ಲಿಪಾರಂಪಳ್ಳಿ ಶ್ರೀ ಮಹಾವಿಷ್ಣುದೇವಸ್ಥಾನದಲ್ಲಿ ಜರುಗಿದ 23ನೇವರ್ಷದ ಕಾರ್ತಿಕ ಮಾಸದ ನಗರ ಭಜನೆಗೆಸಾಲಿಗ್ರಾಮ ಶ್ರೀ ಗುರು ನರಸಿಂಹದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷಡಾ.ಕೆ.ಎಸ್.ಕಾರಂತಚಾಲನೆ ನೀಡಿದರು.

ಬಳಿಕಮಾತನಾಡಿ,ಶಾರೀರಮತ್ತು ಶರೀರ ಸುಸ್ಥಿತಿಯಲ್ಲಿರಲುಭಜನೆ ಮುಖ್ಯವಾದ ಮಾಧ್ಯಮವಾಗಿದೆ.ನಮ್ಮಮನಸ್ಸಿನ ಆರೋಗ್ಯಕ್ಕೆ ಭಜನೆಸಹಕಾರಿ ಎಂದರು.

ಪಾರಂಪಳ್ಳಿಶ್ರೀ ಮಹಾವಿಷ್ಣು ದೇವಸ್ಥಾನದವ್ಯವಸ್ಥಾಪನಾ ಸಮಿತಿ ಹಾಗೂ ಶ್ರೀಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷ ಪಿ.ರಾಮಚಂದ್ರಉಪಾಧ್ಯ,ಅರ್ಚಕಪಿ.ಜನಾರ್ದನಅಡಿಗ ಮುಖ್ಯ ಅತಿಥಿಗಳಾಗಿದ್ದರು.ಬ್ರಾಹ್ಮಣಮಹಾಸಭಾ ಅಧ್ಯಕ್ಷ ಜಿ.ಪಟ್ಟಾಭಿರಾಮಸೋಮಯಾಜಿ ಕಾರ್ತಿಕ ಮಾಸದ 30ದಿನಗಳಲ್ಲಿವಲಯದ 30ದೇಗುಲಗಳಲ್ಲಿಸಭಾದ ವತಿಯಿಂದ ಪ್ರತಿದಿನ ಸಂಜೆಭಜನೆ ನಡೆಯುವುದಾಗಿ ತಿಳಿಸಿದರು.

ಕಾರ್ಯದರ್ಶಿಕೆ.ರಾಜಾರಾಮಐತಾಳ ನಿರೂಪಿಸಿದರು.ವಲಯವ್ಯಾಪ್ತಿಯಲ್ಲಿರುವ 12ಭಜನಾತಂಡಗಳು ಭಜನಾ ಸಂಕೀರ್ತನೆಯಲ್ಲಿಭಾಗವಹಿಸಿದ್ದವು.

ಗಿರಿಜಾಶಂಕರನಾರಾಯಣ ಮಧ್ಯಸ್ಥ ಚಾರಿಟೆಬಲ್ಟ್ರಸ್ಟ್ ವತಿಯಿಂದ ಐರೋಡಿ ಹಾಗೂಚಿತ್ರಪಾಡಿ ಗ್ರಾಮದ ತಲಾ ಒಬ್ಬರಿಗೆವೈದ್ಯಕೀಯ ನೆರವನ್ನು ಟ್ರಸ್ಟಿಪಾರಂಪಳ್ಳಿ ಸದಾಶಿವ ಮಧ್ಯಸ್ಥವಿತರಿಸಿದರು.ಜತೆ ಕಾರ್ಯದರ್ಶಿ ಪಿ.ಕೃಷ್ಣಪ್ರಸಾದ ಹೇರ್ಳೆ ವಂದಿಸಿದರು.ಗೌರವಸಲಹೆಗಾರ ಎಂ.ಶಿವರಾಮಉಡುಪ,ಉಪಾಧ್ಯಕ್ಷಪಿ.ಸಿ.ಹೊಳ್ಳ,ಕೋಶಾಧಿಕಾರಿಕೆ.ನಾಗರಾಜಉಪಾಧ್ಯ,ಸೂರ್ಯನಾರಾಯಣಅಲ್ಸೆ,ಗ್ರಾಮಪ್ರತಿನಿಧಿಗಳು,ಪಿ.ಸದಾಶಿವಮಧ್ಯಸ್ಥ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net