ಬೈಂದೂರು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಒಂದು ದಿನದ ಖರೀದಿದಾರರ ಹಾಗೂ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರವನ್ನು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು. ಹರಿ ಕುಮಾರ್ ಎ., ಕೆ.ಪಿ.ಶೆಟ್ಟಿ, ಹರೀಶ್ ಜಿ. ಇತರರಿದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಬೈಂದೂರು
ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷಾ ಕಾರ್ಯಕ್ರಮದ ಮೂಲಕ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವ ನಿಟ್ಟಿನಲ್ಲಿ ರ‌್ಯಾಂಪ್ ಎಂಬ ಸ್ಕೀಂ ಮೂಲಕ ಒಂದು ದಿನದ ಖರೀದಿದಾರರ ಹಾಗೂ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಬೈಂದೂರಿನಂತಹ ಕ್ಷೇತ್ರದಲ್ಲಿ ಇದೊಂದು ಅಪರೂಪದ ಕಾರ್ಯಕ್ರಮ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಬೈಂದೂರಿನ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಎಂಎಸ್‌ಎಂಇ ನಿರ್ದೇಶನಾಲಯ, ಕೆಸಿಟಿಯು ಟೆಕ್ಸಾಸ್ ಬೆಂಗಳೂರು, ಮಣಿಪಾಲ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ಆಶ್ರಯದಲ್ಲಿ ನಡೆದ ಒಂದು ದಿನದ ಖರೀದಿದಾರರ ಹಾಗೂ ಮಾರಾಟಗಾರರ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಉತ್ಸವಕ್ಕೆ ಪೂರಕವಾಗಿ ಬೇರೆ ಬೇರೆ ಕಡೆಗಳಿಂದ ಬರುವ ಹೊಸ ವ್ಯವಹಾರಗಳು, ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಆಯೋಜಿಸಿದ ಕಾರ್ಯಕ್ರಮ ಶ್ಲಾಘನೀಯ. ಕೊಚ್ಚಿನ್ ಶಿಪ್‌ಯಾರ್ಡ್‌ನವರೂ ಇದರಲ್ಲಿ ಕೈಜೋಡಿಸಿದ್ದಾರೆ. ಇದರಿಂದ ಹೊಸದಾಗಿ ವ್ಯವಹಾರ, ಉದ್ಯಮ ಆರಂಭಿಸುವ ಯುವಪೀಳಿಗೆಗೆ ಸಹಕಾರದ ಜತೆಗೆ ತರಬೇತಿ ಕೊಡಲು ಅನುಕೂಲಕರ ಎಂದು ಹೇಳಿದರು.
ಕೊಚ್ಚಿನ್ ಶಿಪ್‌ಯಾರ್ಡ್ ಸಿಇಒ ಹರಿ ಕುಮಾರ್ ಎ., ಜಿಲ್ಲಾ ಸಣ್ಣ ಕೈಗಾರಿಕಾ ಅಸೋಸಿಯೇಷನ್ ಉಪಾಧ್ಯಕ್ಷ ಕೆ.ಪಿ.ಶೆಟ್ಟಿ, ಲೀಡ್ ಜಿಲ್ಲಾ ಮ್ಯಾನೇಜರ್ ಹರೀಶ್ ಜಿ., ಯೂನಿವರ್ಸಲ್ ಗ್ರೂಪ್ ನಿರ್ದೇಶಕ ಕನನ್ ಕೃಷ್ಣಮೂರ್ತಿ ಇದ್ದರು. ನಾಗರಾಜ್ ವಿ.ನಾಯಕ್ ಸ್ವಾಗತಿಸಿದರು. ಸೀತಾರಾಮ್ ಶೆಟ್ಟಿ ವಂದಿಸಿದರು. ಪ್ರೀತಿ ನಿರೂಪಿಸಿದರು.
ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ವಿವಿಧ ವಿಷಯದ ಬಗ್ಗೆ ತಜ್ಞರು ತಾಂತ್ರಿಕ ಮಾಹಿತಿ ನೀಡಿದ್ದು, ಮುಂದಿನ ದಿನಗಳಲ್ಲಿ ಬೈಂದೂರು ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಕೈಗಾರೋದ್ಯಮಿಗಳ ಬೆಳವಣಿಗೆಗೆ ವಿವಿಧ ಯೋಜನೆಗಳು ಬರಲು ಅನುಕೂಲಕರವಾಗಿದೆ.