ಸಮಾಜದ ಒಳಿತಿಗೆ ಸಹಾಯ

 ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಲಯನ್ಸ್ ಸಂಸ್ಥೆ ರಮೇಶ್ ರಾಥೋಡ್, ದೀಪಕ್ ಪೆರ್ಮುದೆ ಮೊದಲಾದವರಿದ್ದರು.
ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಲಯನ್ಸ್ ಸಂಸ್ಥೆ ರಮೇಶ್ ರಾಥೋಡ್, ದೀಪಕ್ ಪೆರ್ಮುದೆ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಸೇವಾ ಸಂಸ್ಥೆಗಳು ಮಾನವೀಯ ಮೌಲ್ಯಗಳನ್ನು ರಕ್ಷಿಸುವ ಮೂಲಕ ಬಡವರ ಕಣ್ಣೀರೊರೆಸುವ ಕಾರ್ಯ ನಡೆಸಬೇಕಾಗಿದೆ. ಸಮಾಜದ ಒಳಿತಿಗೆ ತಮ್ಮಿಂದಾದಷ್ಟು ಸಹಾಯ ಮಾಡಿದರೆ ಸ್ಥಾಪಕರ ತತ್ವ ಅದರ್ಶ ಗೌರವಿಸಿದಂತಾಗುತ್ತದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಲಯನ್ಸ್ ಕ್ಲಬ್ 2026-27ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆಯಲ್ಲಿ 50 ವರ್ಷ ಪೂರೈಸಿದ ಡಾ.ಹರಿಕೃಷ್ಣ ಪುನರೂರು, ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಧನಸಹಾಯ ನೀಡಲಾಯಿತು. ಲಯನ್ಸ್ ಮಾಜಿ ರಾಜ್ಯಪಾಲ ಮೆಲ್ವಿನ್ ಡಿಸೋಜ ಪದಗ್ರಹಣ ನಡೆಸಿಕೊಟ್ಟರು.
ಲಯನ್ಸ್ ಸಂಸ್ಥೆ ರಮೇಶ್ ರಾಥೋಡ್, ದೀಪಕ್ ಪೆರ್ಮುದೆ, ಸಂದೀಪ್ ಸುವರ್ಣ ನಿಡ್ದೋಡಿ, ರೋಲ್ಪಿ ಡಿಕೋಸ್ಟ, ನೂತನ ಅಧ್ಯಕ್ಷ ಪ್ರವೀಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಪ್ರಬೋದ್ ಕುಡ್ವ, ಮೋಹನ್ ದಾಸ್ ಹೆಜ್ಮಾಡಿ, ಸುಶೀಲ್ ಕುಮಾರ್, ಸದಾಶಿವ ಹೊಸದುರ್ಗ, ದೇವಪ್ರಸಾದ್ ಪುನರೂರು, ಕಿಶೋರ್ ಶೆಟ್ಟಿ ಬಪ್ಪನಾಡು, ರಂಗನಾಥ ಶೆಟ್ಟಿ, ಭಾನುಮತಿ ಶೆಟ್ಟಿ ಕಕ್ವಗುತ್ತು, ಉದಯಕುಮಾರ್ ಶೆಟ್ಟಿ ಕಾರ್ನಾಡ್, ಲತಾ ಶೇಖರ್, ನಿರುಪಮಾ ಪಿ.ಶೆಟ್ಟಿ, ಶೋಭಾ ಸುಜಿತ್ ಸಾಲ್ಯಾನ್, ಉದಯ ಅಮೀನ್ ಮಟ್ಟು, ಲಿಯೋ ಕ್ಲಬ್ ನೂತನ ಅಧ್ಯಕ್ಷೆ ಶ್ರದ್ಧಾ ಕೋಟ್ಯಾನ್, ಕಾರ್ಯದರ್ಶಿ ಸಮೃದ್ಧಿ ಸತೀಶ್, ಕೋಶಾಧಿಕಾರಿ ಆಶ್ರೀತಾ ರಾಜೇಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಉದಯ ಅಮೀನ್ ಮಟ್ಟು, ಶೀತಲ್ ಸುಶೀಲ್ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net