ಬಂಟ್ವಾಳ: ಹದಿಹರೆಯದ ಹುಡುಗ-ಹುಡುಗಿಯರು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಹಾದಿ ತಪ್ಪುತ್ತಿರುವುದಕ್ಕೆ ಸೂಕ್ತ ಮಾರ್ಗದರ್ಶನ, ಅರಿವಿನ ಕೊರತೆ ಮುಖ್ಯ ಕಾರಣ. ವಿವಿಧ ರೀತಿಯ ದೌರ್ಜನ್ಯಗಳಿಂದ ಮುಕ್ತರಾಗಬೇಕಾದರೆ ತಮಗೆ ಆಪ್ತರಾದ ನಂಬಿಕಸ್ಥರು, ತಂದೆ-ತಾಯಿ, ಶಿಕ್ಷಕರಿಂದ ನೆರವು ಪಡೆದುಕೊಳ್ಳುವುದು ಅವಶ್ಯ ಎಂದು ಮಂಗಳೂರಿನ ಸಖಿ -1 ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಪ್ರಿಯಾ ರಾಜ್ ಮೋಹನ್ ಹೇಳಿದರು.