

ಮುಡಿಪು ಜಂಕ್ಷನ್‌ನಲ್ಲಿ ಜಮೀನಿಗೆ ದುಬಾರಿ ದರವಿದೆ, ಹೋಟೆಲ್ ಬಾಡಿಗೆ ಅತ್ಯಂತ ದುಬಾರಿಯಾಗಿದೆ. ಆದರೆ ಮೂಲಸೌಕರ್ಯ ಕಲ್ಪಿಸದ ಕಾರಣ ಸ್ಥಳೀಯರು ಬೆಲೆ ತೆರಬೇಕಾಗಿದೆ. ಸ್ಥಳೀಯ ಬಾವಿಗಳ ನೀರು ಕಲುಷಿತಗೊಂಡು ಬಳಕೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಹೋಟೆಲ್ ಕಲುಷಿತ ನೀರು ರಸ್ತೆ ಬದಿ ನಿಂತು ಸ್ಥಳೀಯರಿಗೆ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಿಂದಿನ ಪಿಡಿಒ ಅಶೋಕ್ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲು ಗಡುವು ನೀಡಿದ್ದರು. ಪ್ರಸ್ತುತ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.