ಭಾರೀ ಗಾಳಿ ಮಳೆಗೆ ಅಪಾರ ಹಾನಿ

ಕಡ್ತಲ ಗ್ರಾಮದ ಕಂಬ್ಳಗುಡ್ಡೆ ನಿವಾಸಿ ಕುಸುಮಾ ಎಂಬುವರ ವಾಸ್ತವ್ಯದ ಮನೆಗೆ ರಾತ್ರಿ ಮರ ಬಿದ್ದು ಅಪಾರ ಹಾನಿಯಾಗಿರುವುದು.
ಕಡ್ತಲ ಗ್ರಾಮದ ಕಂಬ್ಳಗುಡ್ಡೆ ನಿವಾಸಿ ಕುಸುಮಾ ಎಂಬುವರ ವಾಸ್ತವ್ಯದ ಮನೆಗೆ ರಾತ್ರಿ ಮರ ಬಿದ್ದು ಅಪಾರ ಹಾನಿಯಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕಾರ್ಕಳ ತಾಲೂಕಿನಲ್ಲಿ ಭಾರಿ ಗಾಳಿ ಮಳೆ
  • ಅಡಿಕೆ ಬೆಳೆ, ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿ
ಕಾರ್ಕಳ: ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರೀ ಗಾಳಿ ಮಳೆಗೆ ಅಪಾರ ಹಾನಿಯುಂಟಾಗಿದೆ.
ಕಡ್ತಲ ಗ್ರಾಮದ ಕಂಬ್ಳಗುಡ್ಡೆ ನಿವಾಸಿ ಕುಸುಮಾ ಎಂಬುವರ ವಾಸ್ತವ್ಯದ ಮನೆಗೆ ರಾತ್ರಿ ಮರ ಬಿದ್ದು ಹಾನಿಯಾಗಿದೆ. ಸಾಣೂರು ಗ್ರಾಮದ ಆಲ್ವಿನ್ ಪಿಂಟೋ ಕಡೆಬೆಟ್ಟು ಎಂಬುವರ ಅಡಿಕೆ ಬೆಳೆ ಮತ್ತು ಮನೆಗೆ ಮರ ಬಿದ್ದು ಹಾನಿಯಾಗಿದೆ. ಮರ್ಣೆ ಗ್ರಾಮದ ಗುಡ್ಡೆಯಂಗಡಿ ಬಂಗ್ಲೆಗುಡ್ಡೆ ನಿವಾಸಿ ಆನಂದ ಎಂಬುವರ ಮನೆಯ ಹೆಂಚು ಹಾಗೂ ಸಿಮೆಂಟ್ ಶೀಟ್ ಹಾರಿ ಹೋಗಿದೆ. ಇದೇ ಗ್ರಾಮದ ಬಸವರಾಜ ಎಂಬುವರ ಮನೆಯ ಹೆಂಚು ಹಾರಿ ಹೋಗಿದೆ ಹಾಗೂ ಸುಜಾತಾ ಎಂಬುವರ ಮನೆಯ ಸಿಮೆಂಟ್ ಶಿಟ್ ಹಾರಿ ಹೋಗಿದೆ. ಅಮ್ಮನಿ, ಗಣೇಶ್ ಜೋಗಿ ಹಾಗೂ ಸೀತಾ ಆಚಾರ್ಯ ಎಂಬುವರ ಮನೆಗೂ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net