ಸಮಾಜ ಸೇವೆಯೂ ದೇವರ ಪೂಜೆಗೆ ಸಮಾನ

ಉಡುಪಿಯಲ್ಲಿ ಆಯೋಜಿಸಿದ್ದ ಶ್ರವಣ ಮತ್ತು ಸಮತೋಲನ ತಪಾಸಣೆ, ರಕ್ತದಾನ ಶಿಬಿರವನ್ನು ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಡಾ.ದೀಪಾ ಎನ್. ದೇವಾಡಿಗ, ಜಯರಾಮ್ ಆಚಾರ್, ರಘುಪತಿ ರಾವ್, ಮನೀಶ್, ವಿಷ್ಣು ಪ್ರಸಾದ್ ಪಾಡಿಗಾರ್ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಶ್ರವಣ ಮತ್ತು ಸಮತೋಲನ ತಪಾಸಣೆ, ರಕ್ತದಾನ ಶಿಬಿರವನ್ನು ವಿದ್ಯಾಸಾಗರ ತೀರ್ಥ ಶ್ರೀಪಾದರು ಉದ್ಘಾಟಿಸಿದರು. ಡಾ.ದೀಪಾ ಎನ್. ದೇವಾಡಿಗ, ಜಯರಾಮ್ ಆಚಾರ್, ರಘುಪತಿ ರಾವ್, ಮನೀಶ್, ವಿಷ್ಣು ಪ್ರಸಾದ್ ಪಾಡಿಗಾರ್ ಇದ್ದರು.
Published on

*ವಿದ್ಯಾಸಾಗರ ತೀರ್ಥ ಶ್ರೀಪಾದ ಆಶೀರ್ವಚನ 

* ಶ್ರವಣ ತಪಾಸಣೆ, ರಕ್ತದಾನ ಶಿಬಿರ ಉದ್ಘಾಟನೆ

ಉಡುಪಿ: ಪ್ರತಿಯೊಬ್ಬರಲ್ಲೂ ದೇವರು ನೆಲೆಸಿರುತ್ತಾನೆ. ಹೀಗಾಗಿ ಜನರ ಹಾಗೂ ಸಮಾಜದ ಸೇವೆ ಮಾಡಿದರೆ ಅದರಿಂದ ದೇವರ ಸೇವೆ ಮಾಡಿದ ಫಲ ಲಭಿಸುತ್ತದೆ. ದೇಹಕ್ಕೆ ಬೇಕಾದ ವ್ಯಾಯಾಮ ಎಲ್ಲ ಅವಯವಗಳಿಗೂ ಲಭಿಸಿದಾಗ ಮಾತ್ರ ಆರೋಗ್ಯಪೂರ್ಣ ಜೀವನ ನಡೆಸಲು ಸಾಧ್ಯ ಎಂದು ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಥಬೀದಿಯಲ್ಲಿರುವ ಶ್ರೀಕೃಷ್ಣ ಸಭಾಭವನದಲ್ಲಿ ಶ್ರೀಕೃಷ್ಣಾಪುರ ಮಠದ ಸೇವಾ ಬಳಗದ ವತಿಯಿಂದ ಹಾಗೂ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಯ ವಾಕ್ ಮತ್ತು ಶ್ರವಣ ವಿಭಾಗ, ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವಿಭಾಗದ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ ಶ್ರವಣ ಮತ್ತು ಸಮತೋಲನ ತಪಾಸಣೆ, ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಿಯಮಿತ ತಪಾಸಣೆ ಅಗತ್ಯ
ವಾಕ್ ಮತ್ತು ಶ್ರವಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಎನ್. ದೇವಾಡಿಗ ಮಾತನಾಡಿ, ದೇಹದಲ್ಲಿ ಎಲ್ಲ ಅಂಗವೂ ಕೂಡ ಮುಖ್ಯ. ಕಿವಿಯೂ ಸಹ ಅತ್ಯಂತ ಪ್ರಮುಖವಾದ ಅಂಗವಾಗಿದೆ. ಆದರೆ, ಇದರ ಬಗ್ಗೆ ತಾತ್ಸಾರ ಭಾವ ಅಧಿಕವಾಗಿದೆ. ಏನಾದರೂ ದೋಷ ಕಾಣಿಸಿಕೊಂಡಾಗ ಮಾತ್ರ ಕಿವಿಯ ತಜ್ಞರಲ್ಲಿ ಪರೀಕ್ಷೆ ಮಾಡಿಸಲು ಬರುವುದು ನಿಜಕ್ಕೂ ವಿಪರ್ಯಾಸ. ಇದರಿಂದ ಕಿವುಡುತನ ಬರಬಹುದು. ಹೀಗಾಗಿ ನಿಯಮಿತವಾಗಿ ಕಿವಿಯ ತಪಾಸಣೆಯೂ ಅತ್ಯಗತ್ಯ. ಕಿವಿಯು ಎಲ್ಲರ ದೇಹದ ಸಮತೋಲನದ ಅಂಗವಾಗಿದ್ದು,ಅದು ಮಿದುಳಿಗೆ ನೇರ ಸಂಪರ್ಕವಾಗಿರುವ ಅಂಗವಾಗಿದೆ ಎಂದು ತಿಳಿಸಿದರು.
ಜಯರಾಮ್ ಆಚಾರ್, ರಘುಪತಿ ರಾವ್, ರಕ್ತನಿಧಿ ವಿಭಾಗದ ಮನೀಶ್ ಉಪಸ್ಥಿತರಿದ್ದರು. 
ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಮುಚ್ಚಿಂತಾಯ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net