

ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಮುಂಚೂಣಿಯಲ್ಲಿರುವ ಜಿಲ್ಲೆ. ಆದರೆ, ಉಡುಪಿ ನಗರ ಭಾಗದಲ್ಲೇ ಇರುವ ಈ ಕುಟುಂಬ ಕಲ್ಯಾಣ ಕೇಂದ್ರ ಕೆಲ ತಿಂಗಳಿಂದ ಬಂದ್ ಆಗಿದೆ. ಯಾವ ಕಾರಣದಿಂದ ಸ್ಥಗಿತ ಮಾಡಿದ್ದಾರೆ ಎಂಬ ಕಾರಣ ತಿಳಿದಿಲ್ಲ. ಇದರಿಂದ ಬಡ ರೋಗಿಗಳಿಗೆ ತೊಂದರೆ ಆಗುತ್ತಿದೆ. ಸಂಬಂಧಿತ ಇಲಾಖೆ ಅಧಿಕಾರಿಗಳು ಸ್ಥಗಿತಗೊಂಡಿರುವ ಈ ಕೇಂದ್ರ ಆರಂಭಿಸಿ ಇಲ್ಲಿ ಮತ್ತೆ ಆರೋಗ್ಯ ಸೇವೆ ಲಭಿಸುವಂತೆ ಕ್ರಮಕೈಗೊಳ್ಳಬೇಕು.
ಉಡುಪಿಯಲ್ಲಿರುವ ಈ ಆರೋಗ್ಯ ಘಟವು ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟಿದ್ದು ಅದನ್ನು ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪ್ತಿಗೆ ಸೇರ್ಪಡಿಸಲಾಗುವುದು. ಅಲ್ಲಿ ಓರ್ವ ವೈದ್ಯರು ಹಾಗೂ 4 ಸಿಬ್ಬಂದಿ ಇದ್ದು, ಆರು ತಿಂಗಳಿಂದ ಅವರಿಗೆ ವೇತನ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಅಲ್ಲಿರುವ ಸಮಸ್ಯೆ ತಿಳಿದು, ಕುಟುಂಬ ಕಲ್ಯಾಣ ಕೇಂದ್ರ ಪುನರಾರಂಭಕ್ಕೆ ತ್ವರಿತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.