ಕುಂದಾಪುರ: ನೆಮ್ಮದಿಯ ಜೀವನಕ್ಕೆ ಆರೋಗ್ಯ ಮುಖ್ಯ. ಅದರಲ್ಲೂ ಕಣ್ಣಿನ ಸುರಕ್ಷತೆ ಕಡೆ ನಾವೆಲ್ಲ ಗಮನ ಹರಿಸಲೇ ಬೇಕು ಎಂದು ನಾವುಂದದ ಮರವಂತೆ& ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ ಜಗದೀಶ ಪೂಜಾರಿ ಹಕ್ಕಾಡಿ ಹೇಳಿದರು.
ನಾವುಂದ ಹಿಂದೂ ಅಭ್ಯುದಯ ಸಂಘ ಮರವಂತೆ ಮತ್ತು ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಮತ್ತು ಶಿರೂರು ಮತ್ತು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ನಾವುಂದದಲ್ಲಿ ನಡೆದ ಕನ್ನಡಕ ಉಚಿತ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಹಿಂದೂ ಅಭ್ಯುದಯ ಸಂದ ಹಿರಿಯ ಸದಸ್ಯ ಎನ್.ಸಂಜೀವ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ಮರವಂತೆ& ಬಡಾಕೆರೆ ವ್ಯವಸಾಯ ಸಂಘದ ನಿರ್ದೇಶಕ ರಾಮ ಕಂತಿಹೊಂಡ ಮತ್ತು ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ನೇತ್ರ ತಪಾಸಕ ರವಿ ಉಪಸ್ಥಿತರಿದ್ದರು.
ಮರವಂತೆ& ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂದ ಸಹಕಾರದಿಂದ 74 ಜನರಿಗೆ ಕನ್ನಡಕಗಳನ್ನು ವಿತರಿಸಲಾಯಿತು.
ಎ.ಶಿವರಾಮ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು. ವ್ನಿಶ್ವರ ಜೋಯಿಸ್ ವಂದಿಸಿದರು. ಸುರೇಶ ಸುವರ್ಣ ಮತ್ತು ಜಿತೇಶ್ ಕೆ.ಪೂಜಾರಿ ಸಹಕರಿಸಿದರು.