ಆರೋಗ್ಯದ ಕಾಳಜಿ ವಹಿಸುವ ತಿಂಗಳು

 ಆಟಿದ ಅಟ್ಟಣೆ ಕಾರ್ಯಕ್ರಮದಲ್ಲಿ ಪ್ರಮುಖರಾದ ದಯಾನಂದ ಕೆ.ಶೆಟ್ಟಿ ದೆಂದೂರು, ಡಾ.ಯು.ಕೆ.ಶೆಟ್ಟಿ, ಪ್ರೇಮ್ ಕುಮಾರ್, ಪ್ರಭಾ ಶೆಟ್ಟಿ, ದಿನೇಶ್ ಕಾಮತ್, ಪ್ರಶಾಂತ್ ಆರ್.ಎಸ್., ಮಹೇಶ್ ಎನ್.ಅಂಚನ್, ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.
ಆಟಿದ ಅಟ್ಟಣೆ ಕಾರ್ಯಕ್ರಮದಲ್ಲಿ ಪ್ರಮುಖರಾದ ದಯಾನಂದ ಕೆ.ಶೆಟ್ಟಿ ದೆಂದೂರು, ಡಾ.ಯು.ಕೆ.ಶೆಟ್ಟಿ, ಪ್ರೇಮ್ ಕುಮಾರ್, ಪ್ರಭಾ ಶೆಟ್ಟಿ, ದಿನೇಶ್ ಕಾಮತ್, ಪ್ರಶಾಂತ್ ಆರ್.ಎಸ್., ಮಹೇಶ್ ಎನ್.ಅಂಚನ್, ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು.
Published on

ಶಿರ್ವ: ನಮ್ಮ ಹಿರಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ತಿಂಗಳು ಆಟಿ. ಹಾಗಾಗಿ ಪ್ರಕೃತಿದತ್ತ ಔಷಧೀಯ ಗುಣವುಳ್ಳ ಗೆಡ್ಡೆ-ಗೆಣಸು, ಸೊಪ್ಪು ತರಕಾರಿಗಳನ್ನು ಹೆಚ್ಚು ಉಪಯೋಗಿಸುತ್ತಿದ್ದರು. ತುಳುನಾಡಿನಲ್ಲಿ ಆಟಿ ತಿಂಗಳೆಂದರೆ ನಂಬಿಕೆಯ ತಿಂಗಳಾಗಿದೆ. ಕೃಷಿ ಬದುಕಿನೊಂದಿಗೆ ಸಮ್ಮಿಳಿತವಾಗಿದ್ದ ತುಳುವರ ಜನಜೀವನ ಕಷ್ಟಕರವಾಗಿದ್ದರೂ ಇಡೀ ವರ್ಷಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಆಟಿ ತಿಂಗಳ ಬಿಡುವಿನ ವೇಳೆಯಲ್ಲಿ ಮಾಡಿಕೊಳ್ಳುತ್ತಿದ್ದರು ಎಂದು ಜಾನಪದ ವಿದ್ವಾಂಸ ದಯಾನಂದ ಕೆ.ಶೆಟ್ಟಿ ದೆಂದೂರು ಹೇಳಿದರು.

ಕಟಪಾಡಿ ಎಸ್‌ವಿಎಸ್ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಆಟಿ ತಿಂಗಳ ಸಂಪ್ರದಾಯ, ಆಹಾರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ಉದ್ದೇಶದಿಂದ ಎಸ್‌ವಿಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಆಟಿದ ಅಟ್ಟಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

ಕಟಪಾಡಿಯ ವೈದ್ಯ ಡಾ.ಯು.ಕೆ.ಶೆಟ್ಟಿ ಉದ್ಘಾಟಿಸಿದರು. ಕಟಪಾಡಿ ಎಸ್‌ವಿಎಸ್ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರಭಾ ಶೆಟ್ಟಿ, ಕೋಶಾಧಿಕಾರಿ ದಿನೇಶ್ ಕಾಮತ್, ಕಲಾ ಕಾರ್ಯದರ್ಶಿ ಪ್ರಶಾಂತ್ ಆರ್.ಎಸ್., ನಿಕಟಪೂರ್ವ ಕೋಶಾಧಿಕಾರಿ ಮಹೇಶ್ ಎನ್.ಅಂಚನ್, ನಾಟಕ ಕಲಾವಿದ ನಾಗೇಶ್ ಕಾಮತ್ ಕಟಪಾಡಿ ಉಪಸ್ಥಿತರಿದ್ದರು. ಹಳೇ ವಿದ್ಯಾರ್ಥಿ ಸಂಘದ ಸದಸ್ಯ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಎನ್.ಜಿ.ಸುಕುಮಾರ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net