ಬದಿಯಡ್ಕ: ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ತೆರಳಿದ ಯುವಕ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ. ಪೆರಡಾಲ ಪಂಜಿನಡ್ಕ ನಿವಾಸಿ ಕುಂಞಿ ರಾಮನ್ ಎಂಬುವರ ಪುತ್ರ ರಾಜೇಶ್(42) ನಾಪತ್ತೆಯಾದವರು.
ಈ ಬಗ್ಗೆ ಅವರ ಸಹೋದರ ಅನಿಲ್ ಕುಮಾರ್ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಅಯೋಧ್ಯೆಗೆ ಹೋಗಿದ್ದು ಅಲ್ಲಿಂದ ಊರಿಗೆ ಮರಳುತ್ತಿದ್ದರು.
ಈ ಮಧ್ಯೆ ಜುಲೈ 22ರಂದು ಸಂಜೆ ಮಧ್ಯಪ್ರದೇಶದ ಇಚ್ಚಾರ್ಸಿ ಎಂಬಲ್ಲಿ ಇಳಿದು ಅಲ್ಲಿಂದ ಬೇರೆ ಯಾವುದೋ ರೈಲಿಗೆ ಹತ್ತಿದ್ದು ಬಳಿಕ ನಾಪತ್ತೆಯಾಗಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.