ಹ್ಯಾಶಿಶ್ ಆಯಿಲ್ ವಶ, ಯುವತಿ ಬಂಧನ

Arrest
Arrest
Published on
ಕಾಸರಗೋಡು: ಕೋಯಿಕ್ಕೋಡಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಗರ್ಭಿಣಿಯೊಂದಿಗೆ ಬಂದ ಯುವತಿ ಬ ಳಿಯಲ್ಲಿದ್ದ 29 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡು ಬಂಧಿಸಲಾಗಿದೆ. ವಯನಾಡ್ ಮೇಪಾಡಿ ನಿವಾಸಿ, ಕಾಸರಗೋಡಿನಲ್ಲಿ ವಾಸವಿರುವ ಅಶ್ವತಿ ಬಂಧಿತ ಯುವತಿ.
ಪ್ಯಾರಾಚೂಟ್ ತೆಂಗಿನೆಣ್ಣಯ ಸಣ್ಣ ಬಾಟಲಿಯಲ್ಲಿ ಹ್ಯಾಶಿಶ್ ಆಯಿಲ್ ತುಂಬಿಸಲಾಗಿತ್ತು. ಆಸ್ಪತ್ರೆ ಸಿಬ್ಬಂದಿಗೆ ಈಕೆ ಮೇಲೆ ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಆಸ್ಪತ್ರೆಗೆ ಬಂದು ಯುವತಿಯನ್ನು ಬಂಧಿಸಿ ತಪಸಾಣೆ ನಡೆಸಿದಾಗ ಹ್ಯಾಶಿಶ್ ಆಯಿಲ್ ಇರುವುದು ಪತ್ತೆಯಾಗಿದೆ. ಜೈಲಿನಲ್ಲಿರುವ ಪತಿಗೆ ನೀಡಲು ಹ್ಯಾಶಿಶ್ ಆಯಿಲ್ ತಂದಿರುವುದಾಗಿ ಯುವತಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಈಕೆ ವಾದಕ ದ್ರವ್ಯ ವ್ಯಾಪಾರಿಯಾಗಿರಬೇಕೆಂದು ಸಂಶಯಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net