ಹರ್ಷ ರಾಯಲ್​ ರಿಪಬ್ಲಿಕ್​ ಡೀಲ್ಸ್​ ಅದೃಷ್ಟಶಾಲಿಗಳ ಆಯ್ಕೆ

ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆ ಹರ್ಷ ಮಳಿಗೆಯಲ್ಲಿ ನಡೆಯಿತು.
ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆ ಹರ್ಷ ಮಳಿಗೆಯಲ್ಲಿ ನಡೆಯಿತು.
Published on
ಉಡುಪಿ: ಪ್ರಸಿದ್ಧ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಹರ್ಷ ಗಣರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ 'ರಾಯಲ್​ ರಿಪಬ್ಲಿಕ್​ ಡೀಲ್ಸ್​' ಶಾಪಿಂಗ್​ ಮೇಳದಲ್ಲಿ 15,000 ರೂ.ಗಿಂತ ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬೈಕ್​ ಗೆಲ್ಲುವ ಅವಕಾಶ ಕಲ್ಪಿಸಲಾಗಿದ್ದು, ಅದೃಷ್ಟಶಾಲಿ ವಿಜೇತರ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಿಟಿ ಬಸ್​ ನಿಲ್ದಾಣದ ಸಮೀಪವಿರುವ ಹರ್ಷ ಮಳಿಗೆಯಲ್ಲಿ ನಡೆಯಿತು.

ನಾಲ್ಕು ವಲಯಗಳ ನಾಲ್ವರು ಅದೃಷ್ಟಶಾಲಿ ಗ್ರಾಹಕರು 'ರಾಯಲ್​ ಎನ್​ಫೀಲ್ಡ್​' ಬೈಕ್​ ಬಹುಮಾನ ಪಡೆದಿದ್ದಾರೆ. ವಲಯ 1ರಲ್ಲಿ ಉಡುಪಿ, ಬ್ರಹ್ಮಾವರ, ಕುಂದಾಪುರ ಮಳಿಗೆಗಳು, ವಲಯ 2ರಲ್ಲಿ ಮಂಗಳೂರು, ಸುರತ್ಕಲ್​ ಮತ್ತು ಪುತ್ತೂರು ಮಳಿಗೆಗಳು, ವಲಯ 3ರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಕಲ್ಬುರ್ಗಿ ಮಳಿಗೆಗಳು, ವಲಯ 4ರಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಸಾಗರ ಮಳಿಗೆಗಳಲ್ಲಿ ಸಂಗ್ರಹಿಸಿದ ಕೂಪನ್​ಗಳನ್ನು ತೆರೆದು ಗ್ರಾಹಕರ ಮೂಲಕ ನಾಲ್ಕು ವಲಯಗಳಿಂದ ತಲಾ ಒಬ್ಬರಂತೆ ನಾಲ್ವರು ವಿಜೇತರನ್ನು ಆಯ್ಕೆ ಮಾಡಲಾಗಿದೆ.

ಬಹುಮಾನ ವಿಜೇತರ ವಿವರ
ವಲಯ 1ರಲ್ಲಿ ಜ್ಯೋತಿ ಎಸ್​. (7414), ವಲಯ 2ರಲ್ಲಿ ನುಮಾನ್​ (5681), ವಲಯ 3ರಲ್ಲಿ ಪ್ರವಿಣ್​ (4768), ವಲಯ 4ರಲ್ಲಿ ಗಣೇಶ್​ ಟಿ.ಆರ್​. (3770) ಬಹುಮಾನ ಗಳಿಸಿದ್ದಾರೆ.

ಈ ಸಂದರ್ಭದಲ್ಲಿ ಹರ್ಷ ಸಂಸ್ಥೆಯ ವಾಣಿಜ್ಯ ವಿಭಾಗ ಮುಖ್ಯಸ್ಥ ಸಿದ್ಧಾರ್ಥ್​ ಪ್ರಭು, ಮಾರ್ಕೆಟಿಂಗ್​ ಮುಖ್ಯಸ್ಥ ಶ್ರೀವತ್ಸ ಬಲ್ಲಾಳ್​, ಕ್ಲಸ್ಟರ್​ ಮ್ಯಾನೇಜರ್​ ರೋನ್ಸನ್​ ಡಿಸೋಜಾ, ಸ್ಟೋರ್​ ಮ್ಯಾನೇಜರ್​ ಅಭಿನನ್​, ಸೇಲ್ಸ್​ ವಿಭಾಗದ ಸ್ಟೀವನ್​ ಲೋಬೋ ಹಾಗೂ ರಿಟೇಲ್​ ಕಮರ್ಷಿಯಲ್​ ಆಪರೇಶನ್ಸ್​ ಮ್ಯಾನೇಜರ್​ ಪ್ರವಿಣ್​ ಕುಮಾರ್​ ಉಪಸ್ಥಿತರಿದ್ದರು. ಅವಿನಾಶ್​ ಕಾಮತ್​ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net