ಮಳೆ ನಡಿಗೆಗೆ ಬ್ರೇಕ್: ಆಗಸ್ಟ್ 1ರಂದು ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ಜರುಗಬೇಕಾಗಿದ್ದ ಮಳೆ ನಡಿಗೆ ‘ರೇನಥಾನ್’ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಅನುಮತಿ ನಿರಾಕರಿಸಿದೆ. ದಟ್ಟ ಮಳೆಕಾಡು, ಜಲಪಾತ, ಹೊಳೆಗಳು ಹಾಗೂ ಅಪರೂಪದ ಜೀವವೈವಿಧ್ಯ ಹೊಂದಿರುವ ಈ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ವಾಹನಗಳ ಗದ್ದಲ, ವನ್ಯಜೀವಿಗಳಿಗೆ ತೊಂದರೆ, ಪರಿಸರ ವಾಲಿನ್ಯ ಹೆಚ್ಚುವ ಅಪಾಯವಿದೆ ಎಂದು ಪರಿಸರ ಆಸಕ್ತರ ವಿರೋಧವನ್ನು ಪರಿಣಿಸಿ ಕ್ರಮಕೈಗೊಂಡಿದೆ.