

ಉಡುಪಿ: ಕಟಪಾಡಿಯಲ್ಲಿರುವ ಶ್ರೀಕ್ಷೇತ್ರ ಶಂಕರಪುರದ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ನವರಾತ್ರಿ ದುರ್ಗಾಷ್ಟಮಿಯ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ 108 ಭಜಕರಿಂದ 1,080 ಬಾರಿ ಸಾಮೂಹಿಕ ಹನುಮಾನ ಚಾಲೀಸಾ ಪಠಣ ಭಾನುವಾರ (ಅ.19) ನಡೆಯಿತು.
ಆಶ್ರಮದಲ್ಲಿರುವ 19 ಅಡಿ ಎತ್ತರದ ಕೃಷ್ಣಶಿಲೆಯ ಮುಖ್ಯಪ್ರಾಣನ ಸನ್ನಿಧಿಯಲ್ಲಿ ಶ್ರೀಕ್ಷೇತ್ರದ ಸಾಯಿ ಈಶ್ವರ ಗುರೂಜಿ ಅವರು ಸಾಮೂಹಿಕ ಪಠಣಕ್ಕೆ ಚಾಲನೆ ನೀಡಿದರು.
ದೇಶದಲ್ಲಿ ಪ್ರಕೃತಿ ವಿಕೋಪ ಆಗದಂತೆ, ರೈತರು, ಸೈನಿಕರು ಸೇರಿದಂತೆ ಎಲ್ಲರಿಗೂ ಶ್ರೇಯಸ್ಸು ಲಭಿಸುವಂತೆ, ಗೋ ಹತ್ಯೆ ನಿಷೇಧ ಕಾನೂನು ಜಾರಿ ಮತ್ತು ಗೋವು ರಾಷ್ಟ್ರೀಯ ಪ್ರಾಣಿಯಾಗಿ ಘೋಷಣೆಯಾಗಬೇಕೆಂಬ ಸಂಕಲ್ಪದೊಂದಿಗೆ ಪಠಣ ಮಾಡಲಾಯಿತು.
ಕ್ಷೇತ್ರದ ಟ್ರಸ್ಟಿ ಸತೀಶ ದೇವಾಡಿಗ, ಆಡಳಿತ ಮಂಡಳಿಯ ಲಾವಣ್ಯಾ, ವಿನೋದ, ರಾಜೇಶ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ, ಪ್ರತಿಮಾ ಪ್ರಭಾಕರ, ಜ್ಯೋತಿ ಶೆಟ್ಟಿ, ಚೇತನಾ ಶೆಟ್ಟಿ, ವಿಘ್ನೇಶ ನೀಲಾವರ, ನಾಗರಾಜ ಬೈಂದೂರು, ರಾಘವೇಂದ್ರ ಪ್ರಭು ಕರ್ವಾಲು ಇನ್ನಿತರರು ಉಪಸ್ಥಿತರಿದ್ದರು.