ನೊಂದವರ ಬಾಳಿನ ಬೆಳಕು ಯಕ್ಷಗಾನ ಕಲಾರಂಗ

ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಶ್ರಾವ್ಯಾ ಆಚಾರ್ಯಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಕಿರಣಕುಮಾರ್​ ಕೊಡ್ಗಿ ಉದ್ಘಾಟಿಸಿದರು. ವಸಂತ ಆಚಾರ್ಯ, ಶೋಭಾ ಆಚಾರ್ಯ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಗಣೇಶ್​ ಆಚಾರ್ಯ, ಸುರೇಶ್​ ಆಚಾರ್ಯ, ದಿನೇಶ್​ ಆಚಾರ್ಯ, ಉಷಾ ಆಚಾರ್ಯ, ಸಿದ್ಧಾರ್ಥ ಆಚಾರ್ಯ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಪ್ರೊ. ಕೆ.ಸದಾಶಿವ ರಾವ್​, ವಿದ್ಯಾರ್ಥಿನಿಯರು ಇದ್ದರು.
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್​ನ ವಿದ್ಯಾರ್ಥಿನಿ ಶ್ರಾವ್ಯಾ ಆಚಾರ್ಯಳಿಗೆ ನಿರ್ಮಿಸಿಕೊಟ್ಟ ಮನೆಯನ್ನು ಕಿರಣಕುಮಾರ್​ ಕೊಡ್ಗಿ ಉದ್ಘಾಟಿಸಿದರು. ವಸಂತ ಆಚಾರ್ಯ, ಶೋಭಾ ಆಚಾರ್ಯ, ಯು.ಎಸ್​. ರಾಜಗೋಪಾಲ್​ ಆಚಾರ್ಯ, ಗಣೇಶ್​ ಆಚಾರ್ಯ, ಸುರೇಶ್​ ಆಚಾರ್ಯ, ದಿನೇಶ್​ ಆಚಾರ್ಯ, ಉಷಾ ಆಚಾರ್ಯ, ಸಿದ್ಧಾರ್ಥ ಆಚಾರ್ಯ, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಪ್ರೊ. ಕೆ.ಸದಾಶಿವ ರಾವ್​, ವಿದ್ಯಾರ್ಥಿನಿಯರು ಇದ್ದರು.
Published on

* ಶಾಸಕ ಕಿರಣಕುಮಾರ್​ ಕೊಡ್ಗಿ ಮೆಚ್ಚುಗೆ

* ಸಂಸ್ಥೆಯ 90ನೆಯ ಮನೆ ಹಸ್ತಾಂತರ

ಉಡುಪಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ಘಟಿಸಿದ್ದ ದೋಣಿ ದುರಂತದಲ್ಲಿ ತಂದೆಯ ಕಳೆದುಕೊಂಡು ಕಂಗಾಲಾಗಿದ್ದ ವಿದ್ಯಾರ್ಥಿನಿ ಶ್ರಾವ್ಯಾ ಕುಟುಂಬಕ್ಕೆ ಯಕ್ಷಗಾನ ಕಲಾರಂಗ ಆಸರೆಯಾಗಿದೆ. ನೊಂದಿದ್ದ ಅವರ ಬಾಳಿಗೆ ಧೈರ್ಯ ತುಂಬಿ, ಅಕ್ಷರಾರ್ಥದಲ್ಲಿ ಬೆಳಕು ನೀಡಿದೆ ಎಂದು ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಜಗನ್ನಾಥ ಖಾರ್ವಿ-ರೇಖಾ ದಂಪತಿ ಪುತ್ರಿ, ಎಸ್​ಎಸ್​ಎಲ್​ಸಿಯಲ್ಲಿ ಶೇ.97 ಅಂಕ ಗಳಿಸಿದ್ದ ಶ್ರಾವ್ಯಾ ಖಾರ್ವಿ ಇವಳಿಗೆ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಕುಂದಾಪುರದ ವಸಂತ ಆಚಾರ್ಯ ತಾಯಿಯ ಸ್ಮರಣಾರ್ಥ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ 'ಸರಸ್ವತಿ ಕೃಪಾ' ಮನೆಯನ್ನು ಭಾನುವಾರ (ಮಾ.1) ಉದ್ಘಾಟಿಸಿ ಮಾತನಾಡಿದರು.

ಪುಣ್ಯದ ಕಾರ್ಯಕ್ಕೆ ಅವಕಾಶ

ವಸಂತ ಆಚಾರ್ಯ ಮತ್ತು ಪತ್ನಿ ಶೋಭಾ ಆಚಾರ್ಯ ಮಾತನಾಡಿ, ಕಲಾರಂಗ ನಮಗೆ ಯಾವ ಶ್ರಮವೂ ಇಲ್ಲದೆ ಪುಣ್ಯದ ಕಾರ್ಯಕ್ಕೆ ಅವಕಾಶ ಕಲ್ಪಿಸಿದೆ. ತಾಯಿಯ ನೆನಪು ಸಾರ್ಥಕಗೊಳಿಸಿದೆ. ಪ್ರತಿಭಾವಂತ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿದ್ದು ತುಂಬ ಸಂತಸವಾಗಿದೆ. ಅವಳ ಮುಂದಿನ ಶಿಕ್ಷಣದ ರ್ಖಚನ್ನೂ ಸಹ ನಾವೇ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಯು.ಎಸ್​. ರಾಜಗೋಪಾಲ್​ ಆಚಾರ್ಯ ಮಾತನಾಡಿ, ವಸಂತ ಆಚಾರ್ಯ ಕುಟುಂಬಕ್ಕೆ ಶುಭ ಹಾರೈಸಿದರು. ಗಣೇಶ್​ ಆಚಾರ್ಯ, ಸುರೇಶ್​ ಆಚಾರ್ಯ, ದಿನೇಶ್​ ಆಚಾರ್ಯ, ಉಷಾ ನಾಗೇಶ್​ ಆಚಾರ್ಯ, ಸಿದ್ಧಾರ್ಥ ಆಚಾರ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಸದಸ್ಯರಾದ ಪ್ರೊ. ಕೆ.ಸದಾಶಿವ ರಾವ್​, ವಿಜಯಕುಮಾರ್​ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಅಶೋಕ ಎಂ., ಜಯರಾಂ ಪಡಿಯಾರ್​, ಗಣೇಶ್​ ಬ್ರಹ್ಮಾವರ, ಪ್ರಭಾಕರ್​ ಬಂಡಿ, ವಿನೋದಾ ಎಂ., ಉಪನ್ಯಾಸಕ ನರೇಂದ್ರ, ರಾಘವೇಂದ್ರ ಪೈ, ಶೋಭಾ ಸುವರ್ಣ, ಮಾನ್ವೀ, ಗಂಗೊಳ್ಳಿಯ ವಿದ್ಯಾಪೋಷಕ್​ ವಿದ್ಯಾರ್ಥಿನಿಯರಾದ ನಿಸರ್ಗಾ, ಮನೀಷಾ, ಅಮೂಲ್ಯಾ, ಮಾನ್ಯಾ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್​ ರಾವ್​ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್​ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net