ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಉಡುಪಿ ಧರ್ಮಪ್ರಾಂತ್ಯದ ಮತ್ತು ಕುಂದಾಪುರ ಧರ್ಮಕೇಂದ್ರದ ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಮನೆಯನ್ನು ಕುಂದಾಪುರ ಚರ್ಚಿನ ಧರ್ಮಗುರು ಪೌಲ್ ರೇಗೊ ಆಶಿರ್ವಚನ ಮಾಡಿ ಮನೆಯ ಕೀಲಿಕೈಯಗಳನ್ನು ಮನೆಯವರಿಗೆ ಹಸ್ತಾಂತರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಮತ್ತು ಕುಂದಾಪುರ ಧರ್ಮಕೇಂದ್ರದ ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಮನೆಯನ್ನು ಕುಂದಾಪುರ ಚರ್ಚಿನ ಧರ್ಮಗುರು ಪೌಲ್ ರೇಗೊ ಆಶಿರ್ವಚನ ಮಾಡಿ ಮನೆಯ ಕೀಲಿಕೈಯಗಳನ್ನು ಮನೆಯವರಿಗೆ ಹಸ್ತಾಂತರಿಸಿದರು.
Published on
ಕುಂದಾಪುರ: ಯೇಸು ಕ್ರಿಸ್ತರ 2025ರ ಜುಬಿಲಿ ಈ ವರ್ಷದಲ್ಲಿ ಉಡುಪಿ ಧರ್ಮಪ್ರಾಂತ್ಯದ ಹಲವಾರು ಯೋಜನೆಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರತಿ ಧರ್ಮ ಕೇಂದ್ರದಲ್ಲಿ ಬಡವರಿಗಾಗಿ ಒಂದು ಮನೆ ಕಟ್ಟಿಕೊಡುವ ಯೋಜನೆ ಹಮ್ಮಿಕೊಡಿದ್ದು, ಈ ಯೋಜನೆ ಪ್ರಕಾರ ಕುಂದಾಪುರ ಧರ್ಮಕೇಂದ್ರದ ಹೇರಿಕುದ್ರು ಸಂತ ಅಂತೋನಿ ವಾಳೆಯ ಮೆಲ್ಕಮ್ ಮತ್ತು ಬ್ಲಾಂಚಿ ಬ್ರಗಾಂಜಾ ಅವರಿಗೆ ಉಡುಪಿ ಧರ್ಮಪ್ರಾಂತ್ಯದ ಮತ್ತು ಕುಂದಾಪುರ ಧರ್ಮಕೇಂದ್ರದ ದಾನಿಗಳ ಸಹಕಾರದಿಂದ ನಿರ್ಮಾಣ ಮಾಡಿದ ಮನೆಯನ್ನು ಕುಂದಾಪುರ ಚರ್ಚಿನ ಧರ್ಮಗುರು ಪೌಲ್ ರೇಗೊ ಆಶಿರ್ವಚನ ಮಾಡಿ ಮನೆಯ ಕೀಲಿಕೈಯಗಳನ್ನು ಮನೆಯವರಿಗೆ ಹಸ್ತಾಂತರಿಸಿದರು.
ಕುಂದಾಪುರ ಸಂತ ಜೋಸೆಫ್ ಚರ್ಚಿನ ಮುಖ್ಯಸ್ಥೆ ಸುಪ್ರಿಯ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ತಕ್ಕ ಸಮಯಕ್ಕೆ ಮನೆ ನಿರ್ಮಾಣ ಮಾಡಿಕೊಟ್ಟ ಜೋಯ್ ರೆಬೆಲ್ಲೊ ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಸಂತ ವಿನ್ಸೆಂಟ್ ಪಾವ್ಲ್ ಸಮಿತಿ ಅಧ್ಯಕ್ಷ ಇಗ್ನೆಶಿಯಸ್ ಡಿಕುನ್ಹಾ ಸ್ವಾಗತಿಸಿದರು. ವಾಳೆಯ ಗುರಿಕಾರ ನೊವೆಲ್ ಗೊನ್ಸಾಲ್ವಿಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರಾದ ವಿಕ್ಟರ್ ಡಿಸೋಜಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net