ಮಠ-ಮಾನ್ಯ, ಪುರೋಹಿತರ ಮನೆ, ಸಾಂಸ್ಥಿಕ ಭಂಡಾರ, ದೇವಾಲಯ, ಗ್ರಂಥಾಲಯ, ಆಶ್ರಮ, ಖಾಸಗಿಯವರು ತಮ್ಮ ಬಳಿ ಹಸ್ತಪ್ರತಿಗಳ ಸಂಗ್ರವಿದ್ದರೆ ಹಾನಿಯಾಗದಂತೆ ಕಾಯ್ದುಕೊಳ್ಳಬೇಕು. ಅವುಗಳನ್ನು ಜ್ಞಾನ ಭಾರತಂ ಆ್ಯಪ್ (gynabharatham.com) ಮೂಲಕ ಸಮೀಕ್ಷೆಯಲ್ಲಿ ಸ್ವಯಂ ಅಪ್ಲೋಡ್ ಮಾಡಬಹುದು. ಈಗಾಗಲೇ ಜಿಲ್ಲೆಯಲ್ಲಿ ಹಸ್ತ ಪ್ರತಿಗಳ ಗಣತಿ ಕಾರ್ಯ ಪ್ರಾರಂಭವಾಗಿದ್ದು, 40 ಕೇಂದ್ರಗಳಲ್ಲಿ 6 ಸಾವಿರಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಆ್ಯಪ್ನಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ. ಡಿಜಿಟಲೀಕರಣ ಕಾರ್ಯಕ್ಕೆ ತರಬೇತಿ ಅಥವಾ ಮಾಹಿತಿ ಅಗತ್ಯವಿದ್ದಲ್ಲಿ ಜ್ಞಾನ ಭಾರತಂನ ಜಿಲ್ಲಾ ಸಂಯೋಜಕ ಡಾ. ಬಿ.ಗೋಪಾಲ ಆಚಾರ್ಯ (ಮೊ.ಸಂ. 7892991690) ಅವರನ್ನು ಸಂಪರ್ಕಿಸಬಹುದು ಎಂದು ಡಿಸಿ ಸ್ವರೂಪಾ ತಿಳಿಸಿದರು.