ಬದುಕಿಗೆ ಸರಿಯಾದ ಪಥ ನೀಡುವ ಗುರುಗಳು

 ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಸ್ವಾಮಿನಿ ಶ್ರೀ ಮಂಗಳಾಮೃತ ಪ್ರಾಣ ಸತ್ಸಂಗ ನೆರವೇರಿಸಿದರು. ಪ್ರಮುಖರಾದ ಶಿವರಾಮ ಯೇನೆಕಲ್ಲು, ಚಂದ್ರಶೇಖರ ನಾಯರ್, ಪ್ರಭಾಕರ ಪಡ್ರೆ, ಗಣೇಶ್ ಪ್ರಸಾದ್ ಎನ್. ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಸ್ವಾಮಿನಿ ಶ್ರೀ ಮಂಗಳಾಮೃತ ಪ್ರಾಣ ಸತ್ಸಂಗ ನೆರವೇರಿಸಿದರು. ಪ್ರಮುಖರಾದ ಶಿವರಾಮ ಯೇನೆಕಲ್ಲು, ಚಂದ್ರಶೇಖರ ನಾಯರ್, ಪ್ರಭಾಕರ ಪಡ್ರೆ, ಗಣೇಶ್ ಪ್ರಸಾದ್ ಎನ್. ಮತ್ತಿತರರು ಉಪಸ್ಥಿತರಿದ್ದರು.
Published on
ಸುಬ್ರಹ್ಮಣ್ಯ: ಬದುಕಿನ ಒತ್ತಡದಿಂದ ಹೊರಗೆ ಬರಲು ಋಷಿ ಮುನಿಗಳು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಬದುಕಿಗೆ ಬೇಕಾದ ಉತ್ತಮ ಪಥವನ್ನು ಗುರುಗಳು ನೀಡುತ್ತಾರೆ. ನಮ್ಮ ಜೀವನವನ್ನು ಯಾವ ರೀತಿಯಲ್ಲಿ ನಡೆಸಬೇಕು ಎನ್ನುವುದನ್ನು ಗುರುಗಳು ನಮಗೆ ಹೇಳಿಕೊಟ್ಟು ಬದುಕನ್ನು ಪಾವನಗೊಳಿಸುತ್ತಾರೆ ಎಂದು ಮಂಗಳೂರಿನ ಶ್ರೀ ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಸ್ವಾಮಿನಿ ಶ್ರೀ ಮಂಗಳಾಮೃತ ಪ್ರಾಣ ಹೇಳಿದರು.
ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಕರಿಕ್ಕಳ ಪಂಜ, ಅಮೃತ ಸ್ವಸಹಾಯ ಸಂಘ ಸುಬ್ರಹ್ಮಣ್ಯ, ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಕಡಬ, ಪಂಜ, ಯೇನೆಕಲ್ಲು, ಕರಿಕ್ಕಳ, ಕೈಕಂಬ, ಕಾಣಿಯೂರು ಆಶ್ರಯದಲ್ಲಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಅಂಗವಾಗಿ ಧ್ಯಾನ ಮತ್ತು ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕುಮಾರಸ್ವಾಮಿ ವಿದ್ಯಾಸಂಸ್ಥೆಗೆ ಆಗಮಿಸಿದ ಸ್ವಾಮಿನಿ ಶ್ರೀ ಮಂಗಳಾಮೃತ ಪ್ರಾಣ ಅವರನ್ನು ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು. ಬಳಿಕ ಅವರು ಸತ್ಸಂಗದೊಂದಿಗೆ ಆಶೀರ್ವಚನ ನೀಡಿದರು. ಭಜನಾ ಕಾರ್ಯಕ್ರಮ, ಧ್ಯಾನ, ಮಹಾಪೂಜೆ ನಡೆದು ಸಹಭೋಜನ ನೆರವೇರಿತು.
ಶಿವರಾಮ ಯೇನೆಕಲ್ಲು, ಚಂದ್ರಶೇಖರ ನಾಯರ್, ಪರಶುರಾಮ ಪಳ್ಳಿಗದ್ದೆ, ಮೋಹನದಾಸ ರೈ, ಡಾ.ರವಿ ಕಕ್ಕೆಪದವು, ದಯಾನಂದ್, ಗಣೇಶ್ ಪ್ರಸಾದ್ ಎನ್, ಅಮೃತ ಸ್ವಸಹಾಯ ಸಂಘದ ಅಧ್ಯಕ್ಷ ಪ್ರಭಾಕರ ಪಡ್ರೆ, ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ, ಕೋಶಾಧಿಕಾರಿ ರಾಮಚಂದ್ರ ದೇವರಗದ್ದೆ, ಸದಸ್ಯರಾದ ಚೇತನ್ ಎಚ್.ಡಿ, ದುಗ್ಗಪ್ಪ ಎಚ್, ಗಣೇಶ್ ಪರ್ವತಮುಖಿ, ಮನೋಜ್ ಸುಬ್ರಹ್ಮಣ್ಯ, ವಿಠಲ ಮೂಲ್ಯ, ಮೋಹನ್ ಸೇರಿದಂತೆ ಕಡಬ, ಪಂಜ, ಯೇನೆಕಲ್ಲು, ಕರಿಕ್ಕಳ, ಕೈಕಂಬ, ಕಾಣಿಯೂರು ಭಕ್ತರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net