ಕಿತ್ತು ಹೋದ ಗುರುಪುರ- ಕೈಕಂಬ ಜಂಕ್ಷನ್ ರಸ್ತೆ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ರಸ್ತೆ ಡಾಂಬರು ಸಂಪೂರ್ಣ ಕಿತ್ತು ಹೋಗಿ ಅಪಾಯಕಾರಿ ಹಂತಕ್ಕೆ ತಲುಪಿದ ವಾಹನ ಸಂಚಾರ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ರಸ್ತೆ ಡಾಂಬರು ಸಂಪೂರ್ಣ ಕಿತ್ತು ಹೋಗಿ ಅಪಾಯಕಾರಿ ಹಂತಕ್ಕೆ ತಲುಪಿದ ವಾಹನ ಸಂಚಾರ.
Published on

ಗುರುಪುರ: ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ರಸ್ತೆ ಡಾಂಬರು ಸಂಪೂರ್ಣ ಕಿತ್ತು ಹೋಗಿ ವಾಹನ ಸಂಚಾರ ಅಪಾಯಕಾರಿ ಹಂತಕ್ಕೆ ತಲುಪಿದೆ.

ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣದ ವೇಳೆ ಅಗೆಯಲಾದ ಗುಂಡಿಗಳಿಗೆ ಸರಿಯಾಗಿ ಮಣ್ಣು ತುಂಬಿಸಿ ಡಾಂಬರು ಅಳವಡಿಸಿಲ್ಲ. ಇಂತಹ ಜಾಗದಲ್ಲಿ ಮಳೆಗೆ ಮಣ್ಣು ಹೂತು ಹೋಗಿ ಯದ್ವಾತದ್ವ ಗುಂಡಿಗಳು ಸೃಷ್ಟಿಯಾಗಿವೆ. ಗುಂಡಿಗಳಲ್ಲಿ ಕೆಲಸ ಮಣ್ಣು ತುಂಬಿದ್ದು ವಾಹನ ಸವಾರರು ಹೈರಾಣಾಗಿದ್ದರೆ, ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕ ಸಾಮಾನ್ಯವಾಗಿದೆ. ಕೆಲವು ವಾಹನಿಗರು ಬಿದ್ದು ಕೈಕಾಲಿಗೆ ಗಾಯ ಮಾಡಿಕೊಂಡ ಘಟನೆ ನಡೆದಿವೆ.
ಜಂಕ್ಷನ್‌ನಲ್ಲಿ ಬಸ್ ತಂಗುದಾಣವಿಲ್ಲ. ಬಜ್ಪೆ, ಮೂಡುಬಿದಿರೆ, ಮಂಗಳೂರಿನತ್ತ ಸಾಗುವ ಪ್ರಯಾಣಿಕರು ರಸ್ತೆ ಬದಿಯಲ್ಲೇ ನಿಲ್ಲುವ ಪರಿಸ್ಥಿತಿ ಇದೆ. ಧಾರಾಕಾರ ಮಳೆಯಾದಾಗ ಎಲ್ಲ ಕಡೆಯಿಂದಲೂ ಜಂಕ್ಷನ್‌ಗೆ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗುತ್ತದೆ. ನೀರಿನ ವೇಗಕ್ಕೆ ಕೈಕಂಬದ ಎಲ್ಲ ಕಡೆ ರಸ್ತೆ ಹಾಳಾಗಿದೆ. ಮೇಲ್ಸೇತುವೆ ನಿರ್ಮಾಣದ ಬಳಿಕ ಜಂಕ್ಷನ್ ಭಾಗದಲ್ಲಿ ಕಳಪೆ ಮಟ್ಟದ ಡಾಂಬರು ಅಳವಡಿಸಿದ್ದರಿಂದ ಈಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net