ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರು ವಂದನಾ ಕಾರ್ಯಕ್ರಮ ಆಚರಿಸಲಾಯಿತು. ಕೆ.ಅಣ್ಣಪ್ಪ ಶೆಣೈ, ವಿದ್ಯಾ ಪೈ, ಸಂತೋಷ್ ಸಗ್ರಿ, ವೈಷ್ಣವಿ ಕಾಮತ್, ಕೆ.ವಿನಾಯಕ್ ಕಿಣಿ, ರೇಶ್ಮಾ ಪ್ರಭು ಹಾಗೂ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಇದ್ದರು.
Published on:
Copied
Follow Us
* ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಸಂತೋಷ್ ಸಗ್ರಿ ಅಭಿಪ್ರಾಯ
* ಇಂದ್ರಾಳಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ
ಉಡುಪಿ: ವಿದ್ಯಾರ್ಥಿಗಳ ಭವಿಷ್ಯ, ವೃತ್ತಿ ಬುದುಕು ಉಜ್ವಲವಾಗುವಲ್ಲಿ ಶಿಕ್ಷಕರ ಪಾತ್ರ ಅಪಾರ. ಶಿಕ್ಷಕ ವೃತ್ತಿಯು ಇತರೆಲ್ಲ ವೃತ್ತಿಗಳಿಗಿಂತ ಶ್ರೇಷ್ಠ. ದೇಶದ ಸಮಗ್ರತೆಯಲ್ಲಿ ಅವರ ಕೊಡುಗೆ ಅನನ್ಯ. ಮಕ್ಕಳು ತಮಗೆ ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಕೂಡದು. ವಿದ್ಯೆ ಕಲಿಸಿದ ಗುರುಗಳ ಋಣ ತೀರಿಸಲಾಗದು ಎಂದು ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಸಂತೋಷ್ ಸಗ್ರಿ ಅಭಿಪ್ರಾಯಪಟ್ಟರು.
ಉಡುಪಿಯ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಗುರುವಾರ (ಸೆ.3) ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಕೆ.ಅಣ್ಣಪ್ಪ ಶೆಣೈ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿ ಮಾತನಾಡಿ, ರೈತರಂತೆ ಶಿಕ್ಷಕರೂ ಸಹ ನಮ್ಮ ಸಮಾಜ ಹಾಗೂ ದೇಶದ ಬೆನ್ನೆಲುಬಾಗಿದ್ದಾರೆ ಎಂದರು.
ಆಡಳಿತ ಮಂಡಳಿಯ ಸದಸ್ಯೆ ವಿದ್ಯಾ ಅಮರ್ ಪೈ, ಕೋಶಾಧಿಕಾರಿ ವೈಷ್ಣವಿ ಕಾಮತ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ.ವಿನಾಯಕ್ ಕಿಣಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಶ್ಮಾ ಪ್ರಭು, ರಕ್ಷಕ-ಶಿಕ್ಷಕರ ಸಂಘದ ಸದಸ್ಯರು, ಶಿಕ್ಷಕ-ಶಿಕ್ಷಕೇತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥನೆ, ಸ್ವಾಗತ ನೃತ್ಯ ಮಾಡಿದರು. ಧೃತಿ ಸ್ವಾಗತಿಸಿದರು. ದಿಶಾ ವಂದಿಸಿದರು. ಅಪೂರ್ವಾ ಕಾರ್ಯಕ್ರಮ ನಿರೂಪಿಸಿದರು.