ಉಡುಪಿಯಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಗುರುವಂದನಾ ಹಾಗೂ ವಿವಿಧ ಕಕ್ಷೆಗಳ ಯೋಗಗುರುಗಳಿಗೆ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು. ಡಾ. ರಾಘವೇಂದ್ರ ರಾವ್, ರವಿರಾಜ್ ಉಪಾಧ್ಯ, ರಾಘವೇಂದ್ರ ಭಟ್, ಹರಿಪ್ರಕಾಶ್ ಪೈ, ಚಂದ್ರಿಕಾ ಪೈ, ಅಶೋಕಕುಮಾರ್, ವಿಶ್ವನಾಥ್ ಭಟ್, ರಾಮಕೃಷ್ಣ ಶರ್ಮ, ಸುರೇಶ್ ಭಕ್ತ ಇತರರಿದ್ದರು.
Published on:
Copied
Follow Us
* ಗಮಕ ವ್ಯಾಖ್ಯಾನಗಾರ ಡಾ. ರಾಘವೇಂದ್ರ ರಾವ್ ಅಭಿಮತ
* ಪತಂಜಲಿ ಯೋಗ ಸಮಿತಿಯಿಂದ ಗುರು ವಂದನೆ
ಉಡುಪಿ: ನಮ್ಮ ವೇದ-ಪುರಾಣ, ಉಪನಿಷತ್ತುಗಳ ಭೋದನೆ ಅವಿಚ್ಛಿನ್ನವಾಗಿ ಮುಂದುವರಿಯಲು ಗುರು-ಶಿಷ್ಯ ಪರಂಪರೆಯೇ ಮುಖ್ಯ ಕಾರಣ. ವೇದಗಳನ್ನು ವಿಂಗಡಿಸಿದ, ಮಹಾಭಾರತ ರಚಿಸಿದ ವ್ಯಾಸ ಮಹರ್ಷಿಗಳ ಜನ್ಮದಿನವೇ ವ್ಯಾಸ ಪೂರ್ಣಿಮೆ ಅಥವಾ ಗುರುಪೂರ್ಣಿಮೆಯಾಗಿದೆ. ಈ ದಿನ ನಮ್ಮೆಲ್ಲ ಗುರುಗಳಿಗೆ ಗೌರವ ಸಲ್ಲಿಸುವ ದಿನವೂ ಆಗಿದ್ದು, ಗುರು-ಶಿಷ್ಯ ಪರಂಪರೆಯು ಹಿಂದೂ ಸಂಸ್ಕೃತಿಯ ಕೊಡುಗೆಯಾಗಿದೆ ಎಂದು ಶಿಕ್ಷಕ ಹಾಗೂ ಹೆಸರಾಂತ ಗಮಕ ವ್ಯಾಖ್ಯಾನಗಾರ ಡಾ. ರಾಘವೇಂದ್ರ ರಾವ್ ತಿಳಿಸಿದರು.
ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಳದ ಶ್ರೀನಿವಾಸ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಉಡುಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗುರು ವಂದನೆ ಸ್ವೀಕರಿಸಿ ಸಂದೇಶ ನೀಡಿದರು.
ಉಡುಪಿ ಜಿಲ್ಲೆಯ ವಿವಿಧ ಕಕ್ಷೆಗಳ ಯೋಗಗುರುಗಳಿಗೆ ಪತಂಜಲಿ ಯೋಗ ಸಮಿತಿ ಕರ್ನಾಟಕದ ವತಿಯಿಂದ ಅಭಿನಂದನಾ ಪ್ರಮಾಣಪತ್ರ ವಿತರಿಸಲಾಯಿತು. ಪತಂಜಲಿ ಯೋಗ ಸಮಿತಿಯ ಅಂತಾರಾಷ್ಟ್ರೀಯ ಯೋಗಗುರು ಭವರಲಾಲ್ ಆರ್ಯ ಆನ್ಲೈನ್ ಮೂಲಕ ಸಂದೇಶ ನೀಡಿದರು. 131 ಯೋಗಾರ್ಥಿಗಳು ಗುರು ಕಾಣಿಕೆ ಸಮರ್ಪಿಸಿದರು.
ಯೋಗಾರ್ಥಿ ಹರಿಪ್ರಕಾಶ್ ಪೈ, ಚಂದ್ರಿಕಾ ಪೈ, ಕುಂದಾಪುರದ ಉದ್ಯಮಿ ಅಶೋಕಕುಮಾರ್ ಅವರನ್ನು ಗೌರವಿಸಲಾಯಿತು. ಯೋಗಪೀಠ ಹರಿದ್ವಾರದ ಆಜೀವ ಸದಸ್ಯರಾದ ವಿಶ್ವನಾಥ್ ಭಟ್, ರಾಮಕೃಷ್ಣ ಶರ್ಮ, ಸುರೇಶ್ ಭಕ್ತ ಹಾಗೂ ಯೋಗ ಸಮಿತಿ ಉಡುಪಿಯ ಪ್ರಭಾರಿಗಳು ಉಪಸ್ಥಿತರಿದ್ದರು.
ಲೀಲಾವತಿ ಹೆಗ್ಡೆ, ಶುಭಾ ಮೆಹಂದಳೆ ಪ್ರಾರ್ಥಿಸಿದರು. ರಾಜ್ಯ ಪತಂಜಲಿ ಯೋಗ ಸಮಿತಿಯ ಸದಸ್ಯ ರಾಘವೇಂದ್ರ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸದಾಶಿವ ರಾವ್ ವಂದಿಸಿದರು. ಲಕ್ಷ್ಮಣ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಾಗರಾಜ್ ಅವರು ಅಗ್ನಿಹೋತ್ರ ಹೋಮ ನೆರವೇರಿಸಿದರು.
"
ಗಂಗಾಜಲವನ್ನು ರಾಮೇಶ್ವರದಲ್ಲಿ ಸಮುದ್ರಕ್ಕೆ ಪ್ರೋಕ್ಷಿಸಿ, ರಾಮೇಶ್ವರದ ಮರಳನ್ನು ಗಂಗೆಯಲ್ಲಿ ವಿಸರ್ಜಿಸಿದಾಗ ತೀರ್ಥಯಾತ್ರೆ ಸಂಪೂರ್ಣವಾಗುತ್ತದೆ. ಅದೇರೀತಿ ಪತಂಜಲಿ ಯೋಗಪೀಠ ಹರಿದ್ವಾರದಲ್ಲಿ ಗಳಿಸಿದ ಜ್ಞಾನವನ್ನು ಎಲ್ಲೆಡೆ ಪಸರಿಸಿ ಅಲ್ಲಿ ಸಂಗ್ರಹಿತ ಗುರು ಕಾಣಿಕೆಯನ್ನು ಹರಿದ್ವಾರ ಗುರುಪೀಠಕ್ಕೆ ಸಮರ್ಪಿಸಿದಾಗ ಯೋಗ ತೀರ್ಥಯಾತ್ರೆ ಸಂಪನ್ನಗೊಳ್ಳುವುದು ವಿಶೇಷ.
— ರವಿರಾಜ್ ಉಪಾಧ್ಯ. ಕುಂಬಾಶಿಯ ಮಹಾಗಣಪತಿ ದೇವಳದ ಪ್ರಧಾನ ಅರ್ಚಕ.