ನಿರ್ವಹಣೆ ಕಾಣದ ಗುಂಡೂರು ಡ್ಯಾಂ

 ಕಿಂಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಮರಮಟ್ಟುಗಳು ತುಂಬಿರುವುದು.
ಕಿಂಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಮರಮಟ್ಟುಗಳು ತುಂಬಿರುವುದು.
Published on
ರಾಘವೇಂದ್ರ ಪೈ ಕುಂದಾಪುರ
ಆಲೂರು ಗ್ರಾಮದಲ್ಲಿರುವ ವಾರಾಹಿ ನೀರಾವರಿ ಯೋಜನೆಯ ಗುಂಡೂರು ಕಿಂಡಿ ಅಣೆಕಟ್ಟು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಡ್ಯಾಂನ ಯಾಂತ್ರೀಕೃತ ಗೇಟ್, ರ‌್ಯಾಂಪ್, ಮೇಲ್ಮಹಡಿಗೆ ತುಕ್ಕು ಹಿಡಿದಿದ್ದು, ಕಿಂಡಿಗಳಲ್ಲಿ ದೊಡ್ಡ ಗಾತ್ರದ ಮರಮಟ್ಟುಗಳು ತುಂಬಿಕೊಂಡಿವೆ.
ದಶಕಗಳ ಹಿಂದೆ 89.98 ಕೋಟಿ ರೂ. ವೆಚ್ಚದಲ್ಲಿ ನಿರ್ವಾಣಗೊಂಡಿರುವ ಗುಂಡೂರು ಡ್ಯಾಂ 0.33 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಬೈಂದೂರು ವ್ಯಾಪ್ತಿಯ ಆಲೂರು, ಕಾಲ್ತೋಡು, ಹೇರಂಜಾಲು, ಸೇನಾಪುರ ಗ್ರಾಪಂ ವ್ಯಾಪ್ತಿಯ ಸುವಾರು 1730 ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ, 7 ಬೃಹತ್ ಕಿಂಡಿಗಳನ್ನು ಹೊಂದಿರುವ ಸ್ವಯಂಚಾಲಿತ ಯಂತ್ರಗಳನ್ನೊಳಗೊಂಡಿರುವ ಈ ಅಣೆಕಟ್ಟಿನಲ್ಲಿ 10 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗುತ್ತದೆ.

ತುಕ್ಕು ಹಿಡಿದ ಕಬ್ಬಿಣ, ತುಂಬಿದ ಮರಮಟ್ಟುಗಳು

ಅಣೆಕಟ್ಟಿನಲ್ಲಿ ನೀರು ಸಂಗ್ರಹವಾದಾಗ ಅದರಲ್ಲಿ ಮರದ ತುಂಡುಗಳು ತುಂಬಿ ನೀರಿನ ಸರಾಗ ಹರಿವಿಗೆ ತಡೆಯಾಗುತ್ತಿದೆ. ಇದರಿಂದ ಕಾಲ್ತೋಡು, ಹೇರಂಜಾಲು, ಆಲೂರು ಮತ್ತು ಸೇನಾಪುರ ಗ್ರಾಪಂ ವ್ಯಾಪ್ತಿಯ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಿನ ಸಮಸ್ಯೆಯಾಗಿದೆ. ನೀರಿನಲ್ಲಿ ತೇಲಿ ಬರುತ್ತಿರುವ ಮರದ ದಿಮ್ಮಿಗಳ ಹೊಡೆತಕ್ಕೆ ಯಾಂತ್ರೀಕೃತ ಗೇಟ್ ಜಖಂಗೊಂಡಿದೆ. ಕಬ್ಬಿಣದ ಮಾಡು, ಗೇಟ್ ಎತ್ತುವ ಯಂತ್ರಗಳು, ಡ್ಯಾಂನ ಬಲಭಾಗದಲ್ಲಿರುವ ಕಬ್ಬಿಣದ ರ‌್ಯಾಂಪ್ ಸಹಿತ ಪ್ರತಿಯೊಂದು ಸಲಕರಣೆಗಳಿಗೆ ತಕ್ಕು ಹಿಡಿದಿದೆ. ಅಣೆಕಟ್ಟು ನಿರ್ವಹಣೆಗೆ ಸಿಬ್ಬಂದಿಯೂ ಇಲ್ಲ. ಸಿಬ್ಬಂದಿಗಾಗಿ ನಿರ್ಮಿಸಿರುವ ವಸತಿಗೃಹ ಪಾಳು ಬಿದ್ದ ಭೂತಬಂಗಲೆಯಂತಾಗಿದೆ.

ಚೆಕ್ ಡ್ಯಾಂಗಳಿಗೆ ಇಂದಿನಿಂದ ನೀರು ಬಿಡಲಾಗಿದೆ. ಮರದ ದಿಮ್ಮಿಗಳನ್ನು ತೆರವು ವಾಡಲಾಗುವುದು. ಸಾಧ್ಯವಾದಷ್ಟು ನಿರ್ವಹಣೆ ವಾಡುತ್ತಿದ್ದೇವೆ. ಅಣೆಕಟ್ಟು ನಿರ್ವಹಣೆಗೆ ನಿಗಮದಿಂದ ನಿರಂತರ ಪತ್ರ ಬರೆದು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ವಾಡಿದ್ದೇವೆ.

ಬಹುತೇಕ ಅಣೆಕಟ್ಟುಗಳು ನಿರ್ವಹಣೆ ಇಲ್ಲದೆ ಉಪಯೋಗಕ್ಕಿಲ್ಲದಂತಾಗಿದೆ. ಇದರಿಂದ ಇಡೀ ಯೋಜನೆ ವಿಫಲವಾಗುತ್ತಿದೆ. ಗುಂಡೂರು ಡ್ಯಾಂ ನಿರ್ವಹಣೆ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಗುಂಡೂರು ಡ್ಯಾಂ ನಿರ್ವಹಣೆ ಹಾಗೂ ಅಲ್ಲಿನ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net