ಉಡುಪಿ: ಯಕ್ಷಗಾನವು ಕರಾವಳಿಯ ಶ್ರೇಷ್ಠ ಹಾಗೂ ವಿಶೇಷ ಕಲೆಯಾಗಿದ್ದು, ಉಡುಪಿಯು ಯಕ್ಷಗಾನ ಕಲೆಯ ತವರೂರು ಆಗಿದೆ. ಇಲ್ಲಿನ ಅಷ್ಟ ಮಠಗಳ ಸಹಕಾರದಿಂದ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸದಾಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಲೇ ಇರುತ್ತದೆ. ಹೀಗಾಗಿ ಉಡುಪಿಯು ಸಾಂಸ್ಕೃತಿಕ ನಗರಿ ಎಂಬ ಖ್ಯಾತಿಗೂ ಪಾತ್ರವಾಗಿದೆ ಎಂದು ಪರ್ಯಾಯ ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಸಂತಸ ವ್ಯಕ್ತಪಡಿಸಿದರು.