ರಾಜ್ಯದಲ್ಲಿ ಒಟ್ಟು 10 ಸಾವಿರ 'ಭಾರತ್ ಜೋಡೋ' ಯುವ ಸಂಘ ಸ್ಥಾಪಿಸಲಾಗುತ್ತಿದೆ. ಸಂಘಗಳಿಗೆ ಪ್ರತಿವರ್ಷ ತಲಾ 10 ಲಕ್ಷ ರೂ. ಅನುದಾನದ ನೀಡಲಾಗುತ್ತದೆ. ವೆಬ್ ಪೋರ್ಟಲ್, ಮೊಬೈಲ್ ಆ್ಯಪ್, ಗ್ರಾಪಂ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಪ್ರತಿ ಸದಸ್ಯರ ನೋಂದಣಿಗೆ ಆಧಾರ್ ನಂಬರ್ ಕಡ್ಡಾಯ. ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರಿರಬೇಕು. ಪ್ರತಿ ಸದಸ್ಯನಿಗೆ ನೋಂದಣಿ ಶುಲ್ಕ 10 ರೂ. ಇರಲಿದೆ. ಎಲ್ಲ ಸಂಘವನ್ನು ಕರ್ನಾಟಕ ಸೊಸೈಟೀಸ್ ರಿಜಿಸ್ಟ್ರೆಫಿನ್ ಆ್ಯಕ್ಟ್ 1960ರ ಅಡಿ ನೋಂದಾಯಿಸಬೇಕು. ಅರ್ಜಿದಾರರು ಅದೇ ಗ್ರಾಪಂ ಅಥವಾ ವಾರ್ಡ್ನ ಸಾಮಾನ್ಯ ನಿವಾಸಿ ಆಗಿರಬೇಕು. ಪ್ರತಿ ಸಂಘವು ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ತಯಾರಿ, ಪಾರದರ್ಶಕ ಲೆಕ್ಕಪತ್ರ, ನಿರ್ವಹಿಸಬೇಕು. ಪ್ರತಿ ಚಟುವಟಿಕೆಯ ವರದಿಯನ್ನು ಜಿಯೋ-ಟ್ಯಾಗ್ ಮಾಡಿದ ಫೋಟೋಗಳೊಂದಿಗೆ ನಿಗದಿತ ಸಾಫ್ಟ್ ವೇರ್ನಲ್ಲಿ ಅಪ್ಲೋಡ್ ಮಾಡಬೇಕು.