ಜೀವ ಉಳಿಸುವ ಸಿಪಿಆರ್​ ಜ್ಞಾನ ಎಲ್ಲರಿಗೂ ಅಗತ್ಯ

ಮಣಿಪಾಲದ ಕೆಎಂಸಿಯಲ್ಲಿ ಆಯೋಜಿಸಿದ್ದ ಸಿಪಿಆರ್​ ಮತ್ತು ಇಸಿಸಿ ತರಬೇತಿ ಕಾರ್ಯಕ್ರಮವನ್ನು ಡಾ. ಶರತ್​ ಕುಮಾರ್​ ರಾವ್​ ಕೆ. ಉದ್ಘಾಟಿಸಿದರು. ಜಾನ್​ ಕಿಮ್​, ಡಾ. ಸಚಿನ್​ ವಿ. ಮೆನನ್​, ಡಾ. ಅನಿಲ್​ ಕೆ. ಭಟ್​, ಡಾ. ವಿಮಲ್​ ಕೃಷ್ಣನ್​ ಎಸ್​., ಡಾ. ಸುಷ್ಮಾ ಪ್ರಭಾತ್​ ಮತ್ತು ಡಾ. ನಿಶಾ ಸಾರಾ ಎಂ.ಜೆ. ಇದ್ದರು.
ಮಣಿಪಾಲದ ಕೆಎಂಸಿಯಲ್ಲಿ ಆಯೋಜಿಸಿದ್ದ ಸಿಪಿಆರ್​ ಮತ್ತು ಇಸಿಸಿ ತರಬೇತಿ ಕಾರ್ಯಕ್ರಮವನ್ನು ಡಾ. ಶರತ್​ ಕುಮಾರ್​ ರಾವ್​ ಕೆ. ಉದ್ಘಾಟಿಸಿದರು. ಜಾನ್​ ಕಿಮ್​, ಡಾ. ಸಚಿನ್​ ವಿ. ಮೆನನ್​, ಡಾ. ಅನಿಲ್​ ಕೆ. ಭಟ್​, ಡಾ. ವಿಮಲ್​ ಕೃಷ್ಣನ್​ ಎಸ್​., ಡಾ. ಸುಷ್ಮಾ ಪ್ರಭಾತ್​ ಮತ್ತು ಡಾ. ನಿಶಾ ಸಾರಾ ಎಂ.ಜೆ. ಇದ್ದರು.
Published on

* ಡಾ. ಶರತ್​ ಕುಮಾರ್​ ರಾವ್​ ಕೆ. ಅಭಿಪ್ರಾಯ

* ಕೆಎಂಸಿಯಲ್ಲಿ ಮಾರ್ಗಸೂಚಿ ಕಾರ್ಯಕ್ರಮ

ಉಡುಪಿ: ಜೀವ ಉಳಿಸುವ ಕೌಶಲ ತಳಮಟ್ಟದವರನ್ನು ತಲುಪಿದಾಗ ಮಾತ್ರ ಅಂತಹ ತರಬೇತಿಗಳ ಪ್ರಯೋಜನ ಲಭಿಸಲು ಸಾಧ್ಯ. ಪೊಲೀಸ್​, ಆಶಾ ಕಾರ್ಯಕರ್ತರು, ಆಟೋ ಚಾಲಕರು, ಶಿಕ್ಷಕರು ಮತ್ತು ಇತರರಿಗೆ ಕಾರ್ಡಿಯೋಪಲ್ಮನರಿ ರಿಸಸಿಟೇಶನ್​ (ಸಿಪಿಆರ್​) ಜ್ಞಾನದ ತರಬೇತಿ ನೀಡಿದರೆ ಹೃದಯಾಘಾತದಿಂದ ಆಸ್ಪತ್ರೆಗೆ  ಬರುವ ಮೊದಲೇ ಅನೇಕರ ಜೀವ ಉಳಿಸಬಹುದು. ಸಿಪಿಆರ್​ ವೈದ್ಯರಿಗೆ ಮಾತ್ರವಲ್ಲ, ಇದು ಪ್ರತಿ ನಾಗರಿಕನೂ ತಿಳಿದಿರಬೇಕಾದ ಕೌಶಲವಾಗಿದೆ ಎಂದು ಮಾಹೆ ಮಣಿಪಾಲದ ಸಹ ಕುಲಪತಿ  (ಆರೋಗ್ಯ ವಿಜ್ಞಾನ) ಡಾ. ಶರತ್​ ಕುಮಾರ್​ ರಾವ್​ ಕೆ. ಅಭಿಪ್ರಾಯಪಟ್ಟರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜ್​ (ಕೆಎಂಸಿ)ನಲ್ಲಿ ಅಮೆರಿಕನ್​ ಹಾರ್ಟ್​ ಅಸೋಸಿಯೇಷನ್​ (ಎಎಚ್​ಎ) ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ (ಎಂಎಎಚ್​ಇ)ನ ಆಶ್ರಯದಲ್ಲಿ ಆಯೋಜಿಸಿದ್ದ "ಭಾರತದಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್​ (ಸಿಪಿಆರ್​) ಮತ್ತು ತುರ್ತು ಕಾರ್ಡಿಯೋವಾಸ್ಕುಲರ್​ ಕೇರ್​ (ಇಸಿಸಿ)ನ 2025ನೇ ಸಾಲಿನ ಮಾರ್ಗಸೂಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಎಚ್​ಎಯ ಏಷ್ಯಾ ಪೆಸಿಫಿಕ್​ ಉಪಾಧ್ಯಕ್ಷ ಜಾನ್​ ಕಿಮ್​ ಮಾತನಾಡಿ, ಹೃದಯ ತುರ್ತು ಸಂದರ್ಭಗಳಲ್ಲಿ ಬದುಕುಳಿಯುವ ಫಲಿತಾಂಶ ಸುಧಾರಿಸುವಲ್ಲಿ ಜಾಗತಿಕ ಸಹಯೋಗದ ಮಹತ್ವ ವಿವರಿಸಿದರು. ಎಎಚ್​ಎ ಇಂಡಿಯಾ ಕನ್ಸಲ್ಟೆಂಟ್​ನ ಪ್ರಾದೇಶಿಕ ನಿರ್ದೇಶಕ ಡಾ. ಸಚಿನ್​ ವಿ. ಮೆನನ್​ ಮಾತನಾಡಿ, ಪುನರುಜ್ಜೀವನ ತರಬೇತಿ ಬಲಪಡಿಸುವಲ್ಲಿ ಭಾರತೀಯ ಸಂಸ್ಥೆಗಳ ಬೆಂಬಲ ಶ್ಲಾಘಿಸಿದರು.
ಕೆಎಂಸಿಯ ಡೀನ್​ ಡಾ. ಅನಿಲ್​ ಕೆ. ಭಟ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಸಿ ಮಣಿಪಾಲದ ತರಬೇತಿ ಕೇಂದ್ರದ ಸಂಯೋಜಕ ಡಾ. ವಿಮಲ್​ ಕೃಷ್ಣನ್​ ಎಸ್​. ವಂದಿಸಿದರು. ಡಾ. ಸುಷ್ಮಾ ಪ್ರಭಾತ್​ ಮತ್ತು ಡಾ. ನಿಶಾ ಸಾರಾ ಮುಂಡಪ್ಪಲ್ಲಿಲ್​ ಜಾಕೋಬ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net